Wednesday, May 8, 2024
Homeಕರಾವಳಿವಿಟ್ಲ: ದಾಖಲೆ ರಹಿತವಾಗಿ ಕಾರಿನಲ್ಲಿ ಲಕ್ಷಾಂತರ ರೂ. ಹಣ ಸಾಗಾಟ: ಪೊಲೀಸರು ಹಣ ಹಾಗೂ ಕಾರನ್ನು...

ವಿಟ್ಲ: ದಾಖಲೆ ರಹಿತವಾಗಿ ಕಾರಿನಲ್ಲಿ ಲಕ್ಷಾಂತರ ರೂ. ಹಣ ಸಾಗಾಟ: ಪೊಲೀಸರು ಹಣ ಹಾಗೂ ಕಾರನ್ನು ವಶಕ್ಕೆ ಪಡೆದ ಪೊಲೀಸರು

spot_img
- Advertisement -
- Advertisement -

ವಿಟ್ಲ: ದಾಖಲೆ ರಹಿತವಾಗಿ ವ್ಯಕ್ತಿಯೊಬ್ಬ ಕಾರಿನಲ್ಲಿ ಲಕ್ಷಾಂತರ ರೂ. ಹಣ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಕಾರನ್ನು ತಡೆದು  ಹಣ ಹಾಗೂ ಕಾರನ್ನು ವಶಕ್ಕೆ ಪಡೆದ ಘಟನೆ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿ ನಡೆದಿದೆ.ಕೊಳ್ನಾಡು ಗ್ರಾಮದ ಸಾಲೆತ್ತೂರು ಕಟ್ಟೆ ನಿವಾಸಿ ಬಶೀರ್ (29) ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿ.

ಮಾ.26 ರಂದು ವಿಟ್ಲ ಠಾಣಾ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಸಾಲೆತ್ತೂರು- ಬಾಕ್ರಬೈಲು ರಸ್ತೆಯ ಮೆದು ಎಂಬಲ್ಲಿ ಕರ್ನಾಟಕ ರಾಜ್ಯದ ಚುನಾವಣೆ ಪ್ರಯುಕ್ತ ತೆರದ ಅಂತರ್ರಾಜ್ಯ ಚೆಕ್‌ ಪಾಯಿಂಟ್‌ ಗೆ ತೆರಳಿ ಸಿಬ್ಬಂದಿಗಳೊಂದಿಗೆ ವಾಹನಗಳ ತಪಾಸಣೆ ಮಾಡುತ್ತಿರುವಾಗ ಸಾಲೆತ್ತೂರು ಕಡೆಯಿಂದ ಬಾಕ್ರಬೈಲು ಕಡೆಗೆ ಬಂದ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಕಾರಿನ ಚಾಲಕನ ಹೆಸರು ಬಶೀರ್‌ ಎಂದು ತಿಳಿಸಿದ್ದಾನೆ.

ಈ ವೇಳೆ ಕಾರಿನ ಎಡ ಬದಿಯ ಡ್ಯಾಶ್‌ ಬೋರ್ಡ್‌ನಲ್ಲಿ 500 ರೂಪಾಯಿ ಮುಖ ಬೆಲೆಯ ತಲಾ 100 ನೋಟುಗಳಿರುವ 3 ಬಂಡಲ್‌ಗಳು ಇದ್ದು ಇದರಲ್ಲಿ ಒಟ್ಟು ರೂಪಾಯಿ 1, 50,000/- ಹಣ ಪತ್ತೆಯಾಗಿದ್ದು ಹಣದ ಬಗ್ಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸದೇ ಇರುವುದರಿಂದ ನಗದು ಹಣ 1, 50,000 ಹಾಗೂ ಕಾರನ್ನು ಮತ್ತು ಕಾರಿನ ಆರ್.ಸಿ ಪ್ರತಿ ವಾಯುಮಾಲಿನ್ಯ ತಪಸಣಾ ಪ್ರತಿ, ವಿಮಾ ಪ್ರತಿಯನ್ನು ಸ್ವಾಧೀನಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಜರುಪಡಿಸಲಾಗಿದೆ.

ಠಾಣಾ ಎನ್ ಸಿ ಆರ್ 22/2023 ರಂತೆ ನೊಂದಾಯಿಸಿಕೊಂಡು ನ್ಯಾಯಾಲಯದಿಂದ ಅನುಮತಿ ಪಡೆಯುವಂತೆ ಹಿಂಬರಹ ನೀಡಿದ್ದು, ನ್ಯಾಯಾಲಯದ ಆದೇಶದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

- Advertisement -
spot_img

Latest News

error: Content is protected !!