Sunday, June 29, 2025
Homeತಾಜಾ ಸುದ್ದಿಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಸಾಮಾಗ್ರಿ ತುಂಬಿದ ಕಾರು ಪತ್ತೆ!

ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಸಾಮಾಗ್ರಿ ತುಂಬಿದ ಕಾರು ಪತ್ತೆ!

spot_img
- Advertisement -
- Advertisement -

ಮುಂಬೈ: ದೇಶದ ಪ್ರಸಿದ್ಧ ಉದ್ಯಮಿ ಮುಕೇಶ್​ ಅಂಬಾನಿಯವರ ಮುಂಬೈ ನಿವಾಸದ ಬಳಿ 20 ಜಿಲೆಟಿನ್ ಕಡ್ಡಿಗಳನ್ನು ಹೊಂದಿರುವ ಎಸ್ ಯುವಿ ಕಾರೊಂದು ಇಂದು ಸಂಜೆ ಪತ್ತೆಯಾಗಿದೆ.

ಮುಂಬೈನ ಪೆಡ್ಡಾರ್ ರಸ್ತೆಯಲ್ಲಿರುವ ಆಂಟಿಲಿಯಾ ನಿವಾಸದ ಬಳಿ ಅನುಮಾನದ ಮೇರೆಗೆ ಭದ್ರತಾ ಸಿಬ್ಬಂದಿಗಳು ಸ್ಕಾರ್ಪಿಯೋ ಗಾಡಿಯನ್ನು ತಪಾಸಣೆ ನಡೆಸಿದಾಗ ಕಾರಿನ ಒಳಗೆ ಪರಿಶೀಲನೆ ನಡೆಸಿದಾಗ ಅದರಲ್ಲಿ 20 20 ಜೆಲಾಟಿನ್ ಸ್ಟಿಕ್‌ಗಳು ಕಾಣಿಸಿವೆ.

ಕೂಡಲೇ ಭದ್ರತಾ ಸಿಬ್ಬಂದಿಗಳು ಬಾಂಬ್ ನಿಗ್ರಹ ದಳ ಮತ್ತು ಶ್ವಾನಪಡೆಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಇವುಗಳನ್ನು ಸ್ಫೋಟಕ ತಯಾರು ಮಾಡಲು ಬಳಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!