Saturday, June 6, 2026
Homeಕರಾವಳಿಬಂಟ್ವಾಳ ‌ಶಾಸಕ‌ ರಾಜೇಶ್ ನಾಯ್ಕ್ ಗೆ ಡಿಕ್ಕಿಯಾಗಿ ಪರಾರಿಯಾದ ಕಾರು

ಬಂಟ್ವಾಳ ‌ಶಾಸಕ‌ ರಾಜೇಶ್ ನಾಯ್ಕ್ ಗೆ ಡಿಕ್ಕಿಯಾಗಿ ಪರಾರಿಯಾದ ಕಾರು

- Advertisement -
- Advertisement -

ಮಂಗಳೂರು: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಕಾರು ಡಿಕ್ಕಿ‌ ಹೊಡೆದು ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ತಾಲೂಕಿನ ತೆಂಕ ಎಡಪದವು ಎಂಬಲ್ಲಿ ಅಪಘಾತ ನಡೆದಿದ್ದು,‌ ಶಾಸಕ ರಾಜೇಶ್ ನಾಯ್ಕ್ ಎಡಪದವು ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳಿ ವಾಪಾಸ್ ಬರುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ.

ಶಾಸಕ ರಾಜೇಶ್ ನಾಯ್ಕ್ ದೇವಸ್ಥಾನದಿಂದ ಹೊರಬಂದು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದ್ದು, ರಾಜೇಶ್ ನಾಯ್ಕ್ ಗೆ ಬಿದ್ದು ಗಾಯಗಳಾಗಿವೆ.

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಾಸಕರಿಗೆ ಚಿಕಿತ್ಸೆ ನೀಡಲಾಗಿದ್ದು, ಮನೆಗೆ ಮರಳಿದ್ದಾರೆ.

ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಸ್ಥಳೀಯರು ಗುರುಪುರ ಎಂಬಲ್ಲಿ ಹಿಡಿದು ಬಜ್ಪೆ ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!