Saturday, June 6, 2026
Homeಕರಾವಳಿಸುಳ್ಯದಲ್ಲಿ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಕಾರು

ಸುಳ್ಯದಲ್ಲಿ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಕಾರು

- Advertisement -
- Advertisement -

ಸುಳ್ಯ: ಮಂಗಳೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ನುಗ್ಗಿದ ಘಟನೆ ಸುಳ್ಯದ ಬೊಳುಬೈಲು ಎಂಬಲ್ಲಿ ಆ. 22ರಂದು ಮುಂಜಾನೆ ಸಂಭವಿಸಿದೆ.

ಸುಳ್ಯ ಗಾಂಧಿನಗರ ನಿವಾಸಿ ಅಶ್ರಫ್ ಅವರು ತಮ್ಮ ಕಾರಿನಲ್ಲಿ ಕುಟುಂಬದವರ ಜತೆ ಮಂಗಳೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ವೇಳೆ ಬೊಳುಬೈಲಿನ ದೇವ ರಬ್ಬರ್‌ ನರ್ಸರಿ ಬಳಿ ತಲುಪುತ್ತಿದ್ದಂತೆ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಟಕ್ಕೆ ನುಗ್ಗಿದೆ. ಕಾರು ಜಖಂಗೊಂಡಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!