Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲಿ ಕಂದಕಕ್ಕೆ ಬಿದ್ದ ಮಹಿಳೆ ಚಲಾಯಿಸುತ್ತಿದ್ದ ಕಾರು: ಐದು ಬೈಕ್ಗಳು ನಜ್ಜುಗುಜ್ಜು

ಉಡುಪಿಯಲ್ಲಿ ಕಂದಕಕ್ಕೆ ಬಿದ್ದ ಮಹಿಳೆ ಚಲಾಯಿಸುತ್ತಿದ್ದ ಕಾರು: ಐದು ಬೈಕ್ಗಳು ನಜ್ಜುಗುಜ್ಜು

- Advertisement -
- Advertisement -

ಉಡುಪಿ: ಮಹಿಳೆ ಚಲಾಯಿಸಿಕೊಂಡು ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ  ಘಟನೆ ಉಡುಪಿಯಲ್ಲಿ ನಡೆದಿದೆ. ಈ ರಭಸಕ್ಕೆ ರಸ್ತೆ ಬದಿಯಲ್ಲಿ ನಿಂತಿದ್ದ ಐದು ಬೈಕ್​ಗಳು ನಜ್ಜುಗುಜ್ಜಾಗಿವೆ.

ಮಹಿಳೆ ಉಡುಪಿಯಿಂದ ಮಣಿಪಾಲಕ್ಕೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ಲಕ್ಷ್ಮೀಂದ್ರ ನಗರದ ಬಳಿ ನಿಯಂತ್ರಣ ತಪ್ಪಿದೆ. ಪಕ್ಕದಲ್ಲಿಯೇ ಇದ್ದ ಕಂದಕಕ್ಕೆ ಕಾರು ಹೋಗಿದೆ. ಕಂದಕದ ಬಳಿ ಮರವಿದ್ದಿದ್ದರಿಂದ ಕಾರು ಕಂದಕಕ್ಕೆ ಉರುಳಿದರೂ ಮರ ಅಡ್ಡ ಬಂದಿದ್ದರಿಂದ ಏನೂ ಅಪಾಯ ಸಂಭವಿಸಿಲ್ಲ.

ಆದರೆ ಕಾರು ಕಂದಕಕ್ಕೆ ಉರುಳುತ್ತಿದ್ದ ರಭಸದಲ್ಲಿ ಅಲ್ಲಿಯೇ ನಿಲ್ಲಿಸಿದ್ದ ಐದು ಬೈಕ್​ಗಳು ಕೂಡ ಕಾರಿಗೆ ಡ್ಯಾಷ್​ ಹೊಡೆದು ಕಂದಕಕ್ಕೆ ಬಿದ್ದುಬಿಟ್ಟಿವೆ. ಇವೆಲ್ಲವೂ ನ್ಯೂ ಮಣಿಪಾಲ್ ಬಜಾರ್​ನ ಸೆಕೆಂಡ್ ಹ್ಯಾಂಡ್ ವಾಹನಗಳಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಮಣಿಪಾಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!