Monday, June 29, 2026
Homeಕರಾವಳಿಉಡುಪಿಕಾಪು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉದ್ಯಮಿ ಬಾಲಕೃಷ್ಣ ಚಿಕಿತ್ಸೆ ಫಲಿಸದೇ ನಿಧನ

ಕಾಪು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉದ್ಯಮಿ ಬಾಲಕೃಷ್ಣ ಚಿಕಿತ್ಸೆ ಫಲಿಸದೇ ನಿಧನ

- Advertisement -
- Advertisement -

ಕಾಪು: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮುಂಬೈಯ ಉದ್ಯಮಿ ಬಾಲಕೃಷ್ಣ ಜಿ. ಪೂಜಾರಿ(60) ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಮುಂಬೈನಿಂದ ಊರಿಗೆ ಬಂದಿದ್ದ ಬಾಲಕೃಷ್ಣ ಅವರು ಮೂಳೂರಿನಲ್ಲಿ ನಿನ್ನೆ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ರು. ಕಾರೊಂದು ಡಿಕ್ಕಿ ಹೊಡೆದಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಿಸಲಾಯ್ತಾದ್ರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರಿ ಮತ್ತು ಸಹೋದರ-ಸಹೋದರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!