Sunday, May 19, 2024
Homeಕರಾವಳಿಉಡುಪಿಮಂಗಳೂರು, ಮಲ್ಪೆ, ಗಂಗೊಳ್ಳಿ ಬಂದರುಗಳಲ್ಲಿ ಮೀನುಗಾರರು ಫುಲ್‌ ಖುಷ್: ಸೀಜನ್ ಅಂತ್ಯದಲ್ಲಿ ಬಲೆಗೆ ಬಿತ್ತು ಭರ್ಜರಿ...

ಮಂಗಳೂರು, ಮಲ್ಪೆ, ಗಂಗೊಳ್ಳಿ ಬಂದರುಗಳಲ್ಲಿ ಮೀನುಗಾರರು ಫುಲ್‌ ಖುಷ್: ಸೀಜನ್ ಅಂತ್ಯದಲ್ಲಿ ಬಲೆಗೆ ಬಿತ್ತು ಭರ್ಜರಿ ಮೀನುಗಳು

spot_img
- Advertisement -
- Advertisement -

ಮಂಗಳೂರು: ಒಂದು ವರ್ಷದಿಂದ ಡೀಸೆಲ್ ಬೆಲೆ ತೀವ್ರ ಹೆಚ್ಚಳ, ಮೀನಿನ ಇಳುವರಿ ಕುಸಿತ, ಕಾರ್ಮಿಕರ ಕೊರತೆ ಮತ್ತಿತರ ಕಾರಣಗಳಿಂದ ಮಂಗಳೂರು, ಮಲ್ಪೆ, ಗಂಗೊಳ್ಳಿ ಬಂದರುಗಳಲ್ಲಿ ಮೀನುಗಾರಿಕೆಯ ಶೇ. 90ರಷ್ಟು ಬೋಟ್‌ಗಳು ದಡಕ್ಕೆ ಸೇರಿದ್ದವು. ಕಳೆದ ವಾರದ ಭಾರಿ ಗಾಳಿ, ಮಳೆಯಿಂದ ಸಮುದ್ರದ ನೀರು ಅಲ್ಲೋಲ ಕಲ್ಲೋಲವಾಗಿ ಉಳಿದ ಶೇ.10 ಬೋಟ್‌ನವರಿಗೆ ಭರ್ಜರಿ ಮೀನು ಸಿಗುತ್ತಿದೆ.

ಇದೀಗ ಕೇಂದ್ರ ಸರಕಾರ ಡೀಸೆಲ್‌ ಮೇಲಿನ ತೆರಿಗೆ ಇಳಿಕೆ ಮಾಡಿದ್ದರಿಂದ ಪ್ರತಿ ಲೀ. ಡೀಸೆಲ್‌ ದರ 94 ರೂ. ನಿಂದ 87 ರೂ.ಗೆ ಇಳಿಕೆಯಾಗಿದೆ. ಆಳ ಸಮುದ್ರ ಮೀನುಗಾರಿಕೆ ಬೋಟ್‌ಗೆ ಪ್ರತಿ ಟ್ರಿಪ್‌ಗೆ ಆರು ಸಾವಿರ ಲೀ. ಡೀಸೆಲ್‌ ಹಾಕುತ್ತಿದ್ದು, 42 ಸಾವಿರ ರೂ. ಉಳಿಕೆಯಾಗುತ್ತಿದೆ. 300 ಎಚ್‌ಪಿ ಬೋಟ್‌ಗೆ ಪ್ರತಿ ದಿನಕ್ಕೆ 300 ಲೀ.ನಂತೆ ತೆರಿಗೆ ಮೊತ್ತ ಕಳೆದು ನೀಡುವುದರಿಂದ ಅನುಕೂಲವಾಗಿದೆ.

ಬೊಂಡಾಸ್‌ ಮಾದರಿಯ ಅಕ್ಟೋಪಸ್‌ ಮೀನು ಪ್ರತಿ ಬೋಟ್‌ಗೆ ಸುಮಾರು 1.5 ಟನ್‌ನಷ್ಟು ಸಿಗುತ್ತಿದ್ದು, ಕೆಜಿಗೆ 200 ರೂ.ಗೆ ಮಾರಾಟವಾಗಿ ರಫ್ತಾಗುತ್ತಿದೆ. ಚೆಮ್ಮಾನ್‌ ಹೆಸರಿನ ಮೀನು ಫಿಶ್‌ ಮಿಲ್‌ಗೆ 30 ರೂ.ನಂತೆ, ಬಂಗುಡೆ 80 ರೂ.ನಿಂದ 150 ರೂ. ತನಕ, ಅಂಜಲ್‌ 800 ರೂ.ಗೆ ಮಾರಾಟವಾಗುತ್ತಿದೆ. ಈ ಮೀನುಗಾರಿಕಾ ವರ್ಷದ ಕೊನೆಯ ಹಂತದಲ್ಲಿ ಉತ್ತಮ ಮೀನುಗಾರಿಕೆಯಾಗುತ್ತಿದೆ.

ಹೆಚ್ಚಿನ ಬೋಟ್‌ನವರು ಡೀಸೆಲ್ ಬೆಲೆ ಹೆಚ್ಚಳ ಸಂದರ್ಭ ಆರ್ಥಿಕ ಹೊರೆ ಉಂಟಾಗಿ ಮೀನುಗಾರಿಕೆ ಸ್ಥಗಿತಗೊಳಿಸಿದ್ದರು. ಹೆಚ್ಚಿನ ಕಾರ್ಮಿಕರು ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಹಾಗೂ ಉತ್ತರ ಭಾರತದವರಾಗಿದ್ದು, ಊರಿಗೆ ಮರಳುತ್ತಿದ್ದಾರೆ. ಮೇ 31ಕ್ಕೆ ಈ ವರ್ಷದ ಮೀನುಗಾರಿಕೆ ಅಂತ್ಯಗೊಳ್ಳಲಿದೆ. ಜೂನ್‌ ಮತ್ತು ಜುಲೈ ತಿಂಗಳು ಸೇರಿ ಒಟ್ಟು 31 ದಿನ ಮೀನುಗಾರಿಕೆಗೆ ರಜೆ ಇರಲಿದೆ.

ಈ ವರ್ಷದ ಮೀನುಗಾರಿಕಾ ಅವಧಿಯಲ್ಲಿ ಮಂಗಳೂರು, ಮಲ್ಪೆ, ಗಂಗೊಳ್ಳಿ ಬಂದರುಗಳಿಂದ ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಕೊನೆಯ ಎರಡು ತಿಂಗಳು ಹೊರತುಪಡಿಸಿ ಉಳಿದ ತಿಂಗಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೀನು ಲಭಿಸಿವೆ. ಅಂಜಲ್, ಬೊಂಡಾಸ್‌, ಕಪ್ಪೆ ಬೊಂಡಾಸ್‌, ಮದ್ಮಲ್, ಫಿಶ್‌ ಮೀಲ್‌ಗೆ ಹೋಗುವ ಮುರು ಮೀನ್‌ ಸಹಿತ ಉತ್ತಮ ಮೀನುಗಾರಿಕೆಯಾಗಿದೆ. ಬಂದರಿನಲ್ಲಿ ಡೀಸೆಲ್‌, ಮಂಜುಗಡ್ಡೆ ಅಂಗಡಿ, ಹೋಟೆಲ್, ಫಿಶ್‌ ಕಟ್ಟಿಂಗ್‌, ಟ್ರಾನ್ಸ್‌ಪೋರ್ಟ್‌ ಸಹಿತ ಎಲ್ಲ ಉದ್ಯಮಗಳೂ ಲಾಭದಾಯಕವಾಗಿ ನಡೆದಿದೆ. ಕಾರ್ಮಿಕರಿಗೂ ಕೈ ತುಂಬಾ ಸಂಬಳ ಲಭಿಸಿದೆ. ಚಿಲ್ಲರೆ ಮೀನು ಮಾರಾಟಗಾರರಿಗೂ ಉತ್ತಮ ವ್ಯಾಪಾರವಾಗಿದೆ.

- Advertisement -
spot_img

Latest News

error: Content is protected !!