Thursday, May 2, 2024
Homeಕರಾವಳಿಮೂಡಬಿದರೆ;ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ

ಮೂಡಬಿದರೆ;ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ

spot_img
- Advertisement -
- Advertisement -

ಮೂಡಬಿದಿರೆ : ಆರ್ಥಿಕ ಮುಗ್ಗಟಿನಿಂದ ನೊಂದು ನದಿಗೆ ಹಾರಿ ಉದ್ಯಮಿ ಆತ್ಮಹತ್ಯೆ ಘಟನೆ ಗುರುಪುರದಲ್ಲಿ ನಡೆದಿದೆ. ಉದ್ಯಮಿ ಆಶಿತ್ ಕುಮಾರ್ (51) ಆತ್ಮಹತ್ಯೆಗೆ ಶರಣಾದವರು.

ಮೂಲತಃ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟ ಗ್ರಾಮದ ಕೇಳದ ಪೇಟೆಯವರಾದ ಆಶಿತ್ ಕುಮಾರ್ ಅವರು ಉದ್ಯಮಿಯಾಗಿದ್ದು ಮೂಡಬಿದಿರೆಯಲ್ಲಿ ಮಹಾವೀರ ಎಲೆಕ್ಟ್ರಾನಿಕ್ಸ್ ಎಂಬ ಅಂಗಡಿ ಹೊಂದಿದ್ದರು. ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಬಳಿಕ ಉದ್ಯಮವನ್ನು ಮುಚ್ಚಿ ಮಂಗಳೂರಿನಲ್ಲಿ ಖಾಸಗಿ ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ತಮ್ಮನ್ನು ತೊಡಗಿಸಿದ್ದ ಅವರು, ಮೂಡಬಿದಿರೆ ತ್ರಿಭುವನ್ ಜೇಸಿಐ ಅಧ್ಯಕ್ಷರಾಗಿ, ವಲಯ 15ರ ವಲಯಾಧಿಕಾರಿ, ವಲಯಾಧ್ಯಕ್ಷರಾಗಿ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದರು. ಕೇಳದಪೇಟೆ ಬಸದಿಯ ಜೀರ್ಣೋದ್ಧಾರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!