Friday, June 5, 2026
Homeತಾಜಾ ಸುದ್ದಿಚಿತ್ರೀಕರಣದ ವೇಳೆ ಅವಘಡ: ನಟ ಅಮಿತಾಬ್‌ ಬಚ್ಚನ್‌ಗೆ ಗಂಭೀರ ಗಾಯ

ಚಿತ್ರೀಕರಣದ ವೇಳೆ ಅವಘಡ: ನಟ ಅಮಿತಾಬ್‌ ಬಚ್ಚನ್‌ಗೆ ಗಂಭೀರ ಗಾಯ

- Advertisement -
- Advertisement -

ಹೈದರಾಬಾದ್‌ನಲ್ಲಿ ʻಪ್ರಾಜೆಕ್ಟ್‌ ಕೆʼ ಸಿನಿಮಾದ ಚಿತ್ರೀಕರಣದ ವೇಳೆ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ಗೆ ಗಂಭೀರ ಗಾಯವಾಗಿದ್ದು ಅವರು ಚಿಕಿತ್ಸೆ ಪಡೆದುಕೊಂಡ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಚಿಕಿತ್ಸೆಯ ಬಳಿಕ ಅಮಿತಾಬ್‌ ಮುಂಬೈನ ನಿವಾಸದಲ್ಲಿ ಬೆಡ್‌ ರೆಸ್ಟ್‌ ನಲ್ಲಿದ್ದು ಈಗಲೂ ನಡೆದಾಡಲು ಕಷ್ಟವಾಗುತ್ತಿದ್ದು, ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಚೇತರಿಸಿಕೊಳ್ಳಲು ಕೆಲವು ಸಮಯವೇ ಬೇಕಾಗಬಹುದು ಎಂದು ಹೇಳಲಾಗಿದೆ.

- Advertisement -

Latest News

error: Content is protected !!