Saturday, June 28, 2025
Homeಕರಾವಳಿಮಂಗಳೂರಿನಲ್ಲಿ ಬಸ್ ಗೆ ಡಿಕ್ಕಿ ಹೊಡೆದ ಬೈಕ್: ಹೊತ್ತಿ ಉರಿದ ಖಾಸಗಿ ಬಸ್

ಮಂಗಳೂರಿನಲ್ಲಿ ಬಸ್ ಗೆ ಡಿಕ್ಕಿ ಹೊಡೆದ ಬೈಕ್: ಹೊತ್ತಿ ಉರಿದ ಖಾಸಗಿ ಬಸ್

spot_img
- Advertisement -
- Advertisement -

ಮಂಗಳೂರು: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿಗೆ ಬೆಂಕಿ ತಗುಲಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ‌ನಗರದ ಹಂಪನಕಟ್ಟೆ ವೃತ್ತದ ಬಳಿ ಅವಘಡ ಸಂಭವಿಸಿದೆ.

ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಈ ವೇಳೆ ಬಸ್ಸಿನ ಎದುರಿನ ಚಕ್ರದಡಿಗೆ ಬೈಕ್ ಬಿದ್ದಿದೆ. ಅಪಘಾತದಲ್ಲಿ ಬೈಕ್ ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬಸ್ಸಿಗೆ ಬೆಂಕಿ ತಗುಲಿದೆ.

ಬೆಂಕಿ ಹತ್ತಿಕೊಂಡ ಪರಿಣಾಮ ಬಸ್ಸಿನ ‌ಮುಂಭಾಗ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಬಸ್ಸಿನಲ್ಲಿದ್ದವರು ಪಾರಾಗಿದ್ದಾರೆ.ಬಸ್ಸಿಗೆ ಬೆಂಕಿ ಬೀಳುತ್ತಲೇ ಬಸ್ ನಿರ್ವಾಹಕ ಪ್ರಯಾಣಿಕರನ್ನು ಇಳಿಸಿದ್ದಾರೆ. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿ ಹೋಗಿದೆ.

- Advertisement -
spot_img

Latest News

error: Content is protected !!