Thursday, June 4, 2026
Homeತಾಜಾ ಸುದ್ದಿಶಾಲೆಗೆ ಹೋಗುವಾಗ 7 ವರ್ಷದ ಬಾಲಕನಿಗೆ ಬಸ್ ಡಿಕ್ಕಿ; ಗಂಭೀರ ಗಾಯಗೊಂಡರೂ ನಡೆದುಕೊಂಡೇ ಹೋಗಿ ತರಗತಿಯಲ್ಲಿ...

ಶಾಲೆಗೆ ಹೋಗುವಾಗ 7 ವರ್ಷದ ಬಾಲಕನಿಗೆ ಬಸ್ ಡಿಕ್ಕಿ; ಗಂಭೀರ ಗಾಯಗೊಂಡರೂ ನಡೆದುಕೊಂಡೇ ಹೋಗಿ ತರಗತಿಯಲ್ಲಿ ಕುಳಿತ ಪುಟಾಣಿ; ಕೆಲ ಹೊತ್ತಲ್ಲೇ ವಿದ್ಯಾರ್ಥಿ ಸಾವು

- Advertisement -
- Advertisement -

ಬೆಂಗಳೂರು: ಶಾಲೆಗೆ‌‌ ನಡೆದುಕೊಂಡು ಹೋಗುತ್ತಿದ್ದ 1ನೇ ತರಗತಿ ವಿದ್ಯಾರ್ಥಿಗೆ ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡರು, ನಡೆದುಕೊಂಡು ಹೋಗಿಯೇ ತರಗತಿಯಲ್ಲಿ ಕುಳಿತ ಬಾಲಕ‌ ಸ್ವಲ್ಪ ಹೊತ್ತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮುನ್ನೇಕೊಳಾಲ ನಿವಾಸಿ ನಿತೀಶ್ ಕುಮಾರ್(7)ಮೃತ ಬಾಲಕ.

ಬಾಲಕ ನಿತೀಶ್  ಬೆಳಗ್ಗೆ 9 ಗಂಟೆ ವೇಳೆಗೆ ಶಾಲೆಯ ಸಮೀಪ ನಡೆದುಕೊಂಡು ಹೋಗುವಾಗ ಬಾಲಕನಿಗೆ ಖಾಸಗಿ ಶಾಲಾ ಬಸ್ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಾಲಕ ಕೆಳಗೆ ಬಿದ್ದು, ತಲೆಗೆ ಗಾಯವಾಗಿತ್ತು. ನೋವಿನಲ್ಲಿಯೇ ಬಾಲಕ, ಶಾಲೆಗೆ ಹೋಗಿ ತರಗತಿಯಲ್ಲಿ ಕುಳಿತುಕೊಂಡಿದ್ದ. ವಿಷಯ ತಿಳಿದ ಶಿಕ್ಷಕರು, ಬಾಲಕನ್ನು ಆರೈಕೆ ಮಾಡುತ್ತಿದ್ದಾಗ ಪ್ರಜ್ಞೆ ತಪ್ಪಿದ್ದ. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ರವಾನೆ ಮಾಡಿದ್ದರು. ಆದ್ರೆ ಬಾಲಕನ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ವಿಠಲ್ ಎಂಬಾತನನ್ನು ಬಂಧಿಸಲಾಗಿದೆ.

- Advertisement -

Latest News

error: Content is protected !!