ಬೆಂಗಳೂರು : ಸ್ವತಃ ರೈತ ನಾಯಕರು ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ ,ಕರ್ನಾಟಕ ಸರ್ಕಾರ ರೈತರು ಬೆಳೆದ ಆಹಾರ ಪದಾರ್ಥಗಳ ನೇರ ಖರೀದಿಗೆ ಅವಕಾಶ ನೀಡಿದೆ.
ಪಶು ಆಹಾರ ತಯಾರಿಕೆಗೆ ಅಗತ್ಯವಾದ ಮೆಕ್ಕೆಜೋಳವನ್ನು 1 ವರ್ಷದ ಅವಧಿಗೆ ರೈತರಿಂದ ಖರೀದಿಸಲು ವಿನಾಯಿತಿ ನೀಡಲಾಗಿದೆ. ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಪಾದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿ ಕ್ವಿಂಟಾಲ್ ಗೆ 1760 ರೂಪಾಯಿ ದರದಲ್ಲಿ ಕೆಎಂಎಫ್ ಖರೀದಿಸಲಿದೆ ಎನ್ನಲಾಗಿದೆ.
ಆಹಾರ ಸಂಸ್ಕರಣಾ ಘಟಕಗಳಿಂದ ಖರೀದಿಗೆ ಅವಕಾಶ ಕಲ್ಪಿಸಲಾಗುವುದು. ರೈತರು ಬೆಳೆದ ಆಹಾರ ಪದಾರ್ಥಗಳ ನೇರ ಖರೀದಿಸಬಹುದಾಗಿದ್ದು, ಹೊರ ರಾಜ್ಯಗಳ ಡೀಲರ್ ಗಳಿಗೆ ಕರ್ನಾಟಕದಿಂದ ಖರೀದಿಗೆ ಅವಕಾಶ ಮಾಡಿಕೊಡಲಾಗುವುದು.
ಆಹಾರ ಸಂಸ್ಕರಣೆಗೆ ಬೇಕಾದ ತರಕಾರಿ, ಹಣ್ಣು ಖರೀದಿಸಲಾಗುವುದು. ರೈತರು, ಸಂಸ್ಕರಣಾ ಘಟಕದವರು ಓಡಾಡಲು ಅವಕಾಶ ನೀಡಲಾಗುವುದು. ರಾಜ್ಯ ಕೃಷಿ ಇಲಾಖೆ ಕಾರ್ಯದರ್ಶಿಯಿಂದ ಈ ಮಾಹಿತಿ ನೀಡಲಾಗಿದೆ. ಆಹಾರ ಸಂಸ್ಕರಣೆ ವಸ್ತುಗಳ ಖರೀದಿಗೆ ಅವಕಾಶ ನೀಡಿದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದಿಂದ ರೈತರಿಗೆ ಬಂಪರ್ ಗಿಫ್ಟ್: ಇಂತಹ ಬಹುಮಾನ ನೀಡಿದ ಮೊದಲ ರಾಜ್ಯ ಕರ್ನಾಟಕ
- Advertisement -
- Advertisement -
- Advertisement -
