Friday, April 26, 2024
Homeಕರಾವಳಿಮದುವೆಯ ಔತಣಕೂಟದಲ್ಲಿ ಯಕ್ಷಗಾನದ ಪದ ಹಾಡಿದ ಮದುಮಗಳು, ಮದ್ದಳೆಯಲ್ಲಿ ಸಾಥ್ ನೀಡಿದ ಮದುಮಗ

ಮದುವೆಯ ಔತಣಕೂಟದಲ್ಲಿ ಯಕ್ಷಗಾನದ ಪದ ಹಾಡಿದ ಮದುಮಗಳು, ಮದ್ದಳೆಯಲ್ಲಿ ಸಾಥ್ ನೀಡಿದ ಮದುಮಗ

spot_img
- Advertisement -
- Advertisement -

ತಮ್ಮ ಮದುವೆಯ  ಔತಣಕೂಟದಲ್ಲಿ ಭಾಗವತರಾದ ಅಮೃತಾ ಅಡಿಗ ಅವರು ಯಕ್ಷಗಾನದ ಹಾಡು ಹಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ತಮ್ಮ ವಿವಾಹದ ಔತಣ ಕೂಟದಲ್ಲಿ ಅವರು ಯಕ್ಷಗಾನದ ಪದ ಹಾಡಿದ್ರೆ ಅವರ ಪತಿ ಪುತ್ತಿಗೆ ಕೌಶಿಕ್ ರಾವ್ ಮದ್ದಳೆಯಲ್ಲಿ ಸಾಥ್ ಕೊಟ್ಟಿದ್ದಾರೆ. ಹಾಗೇ ಮೈದುನ ಕೌಶಲ್ ರಾವ್ ಚಂಡೆ ಬಾರಿಸಿದ್ದಾರೆ.

ಪರಿಪಾಲಿಸು ಶ್ರೀ ಚಂಡಿಕೆ ಮೂಕಾಂಬಿಕೆ ಎಂಬ ಯಕ್ಷಗಾನ ಪದವನ್ನು ಅಮೃತಾ ಅಡಿಗ ಅವರು ಹಾಡಿದ್ದು, ಅವರ ಹಾಡುಗಾರಿಕೆಗೆ ಯಕ್ಷಗಾನ ಪ್ರಿಯರು ತಲೆದೂಗಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.

ತಮ್ಮ‌ ಮದುವೆಯ ಔತಣಕೂಟದಲ್ಲಿ‌ ಅಮೃತಾ‌ ಅಡಿಗ ಅವರಿಂದ ಯಕ್ಷಗಾನದ ಹಾಡು

Posted by Maha Xpress on Sunday, 9 August 2020

- Advertisement -
spot_img

Latest News

error: Content is protected !!