Thursday, June 4, 2026
Homeತಾಜಾ ಸುದ್ದಿಬೆಳ್ತಂಗಡಿ: ಕ್ಲಿನಿಕ್‌ಗೆ ನುಗ್ಗಿ ನಗದು ಕಳ್ಳತನ

ಬೆಳ್ತಂಗಡಿ: ಕ್ಲಿನಿಕ್‌ಗೆ ನುಗ್ಗಿ ನಗದು ಕಳ್ಳತನ

- Advertisement -
- Advertisement -

ಬೆಳ್ತಂಗಡಿ: ಕಳ್ಳರು ಕ್ಲಿನಿಕ್ ವೊಂದಕ್ಕೆ ನುಗ್ಗಿ ಹಣ ದೋಚಿ, ನಂತರ ಸಮೀಪದಲ್ಲೇ ಇದ್ದ ಸಹಕಾರಿ ಸಂಘ ಹಾಗೂ ಹೊಟೇಲ್‌ ವೊಂದರಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಣ್ಣೀರಿ ಪೇಟೆಯಲ್ಲಿ ಇಂದು(ಶುಕ್ರವಾರ) ಬೆಳಗ್ಗೆ ಬೆಳಕಿಗೆ ಬಂದಿದೆ.

ಕ್ಲಿನಿಕ್‌ನಲ್ಲಿ ಕಿಟಕಿಯ ಸರಳುಗಳನ್ನು ಮುರಿದು  ಸುಮಾರು ಏಳು ಸಾವಿರ ರೂ.ನಷ್ಟು ನಗದು ಕದ್ದು, ಬಳಿಕ ಹಿಂಬಾಗಿಲ ಚಿಲಕ ತೆಗೆದು ಪರಾರಿಯಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿದ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!