ಹುಡುಗರು ವಿವಾಹಿತೆಯರಿಗೆ ಆಕರ್ಷಿತರಾಗುವುದು ಹೆಚ್ಚು. ಇತ್ತೀಚಿಗೆ ನಡೆದ ಸಂಶೋಧನೆಯಲ್ಲಿ ಇದನ್ನು ದೃಢಪಡಿಸಲಾಗಿದೆ. ಸಂಶೋಧನೆಯಲ್ಲಿ ಅವಿವಾಹಿತ ಹುಡುಗರು ಯಾಕೆ ವಿವಾಹಿತೆಯರಿಗೆ ಆಕರ್ಷಿತರಾಗ್ತಾರೆ ಎಂಬುದನ್ನು ಹೇಳಲಾಗಿದೆ.
ಮದುವೆಯ ನಂತರ ಮಹಿಳೆಯರ ಹಾರ್ಮೋನುಗಳ ಬದಲಾವಣೆಯಾಗುತ್ತದೆ. ಇದು ಅವರ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಅವರ ಚರ್ಮವು ಬಹಳಷ್ಟು ಹೊಳೆಯಲು ಪ್ರಾರಂಭಿಸುತ್ತದೆ. ಮಹಿಳೆಯರ ಈ ಬದಲಾವಣೆಯು ಪುರುಷರನ್ನು ಆಕರ್ಷಿಸುತ್ತದೆ.
ಸಾಮಾನ್ಯವಾಗಿ ಅವಿವಾಹಿತ ಮಹಿಳೆಯರು ಯಾವಾಗಲೂ ನಗು ಮುಖ ಹೊಂದಿರುತ್ತಾರೆ. ಅವ್ರ ಮುಖದಲ್ಲಿರುವ ಒಂದು ಮಂದಹಾಸ ಹುಡುಗರಿಗೆ ಇಷ್ಟವಾಗುತ್ತದೆ.
ಅವಿವಾಹಿತ ಹುಡುಗಿಯರಿಗಿಂತ ವಿವಾಹಿತ ಮಹಿಳೆಯರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದಾರೆ. ಅವರ ಈ ಆತ್ಮವಿಶ್ವಾಸವು ಹುಡುಗರನ್ನು ಸೆಳೆಯುತ್ತದೆ.
ಅವಿವಾಹಿತ ಹುಡುಗಿಯರಿಗಿಂತ ವಿವಾಹಿತೆಯರು ಹೆಚ್ಚು ಕಾಳಜಿ ಸ್ವಭಾವ ಹೊಂದಿರುತ್ತಾರೆ. ಕುಟುಂಬದ ಬಗ್ಗೆ ಚಿಂತೆ ಮಾಡುತ್ತಾರೆ. ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಇದು ಹುಡುಗರನ್ನು ಆಕರ್ಷಿಸುತ್ತದೆ.