ಲಾಕ್ ಡೌನ್ ಕಾರಣ ದೇಶದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಸೇವೆ ಬಂದ್ ಆಗಿದೆ. ಶಾಲೆಗಳು ಮತ್ತು ಕಾಲೇಜುಗಳು ಸಹ ದೀರ್ಘಕಾಲದವರೆಗೆ ಮುಚ್ಚಲ್ಪಟ್ಟಿವೆ. ಮಕ್ಕಳ ಶಿಕ್ಷಣವು ಹಾಳಾಗದಂತೆ ನೋಡಿಕೊಳ್ಳಲು ಆನ್‌ಲೈನ್ ಮಾಧ್ಯಮಗಳನ್ನು ಬಳಸಲಾಗುತ್ತಿದೆ. ಆದ್ರೆ ಈ ಆನ್ಲೈನ್ ಮಾಧ್ಯಮವನ್ನು ಕೆಟ್ಟದಾಗಿ ಬಳಸಿಕೊಳ್ಳಲಾಗ್ತಿದೆ.
ಅಹಮದಾಬಾದ್ ನಲ್ಲಿ ಇಂಥಹ ಘಟನೆಯೊಂದು ಬೆಳಕಿಗೆ ಬಂದಿದೆ. ಅಹಮದಾಬಾದ್‌ನ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಜೂಮ್ ಕುರಿತು ಆನ್‌ಲೈನ್ ಗುಂಪು ತರಗತಿಯ ಸಮಯದಲ್ಲಿ ಒಬ್ಬ ವ್ಯಕ್ತಿ ಹಸ್ತಮೈಥುನ ಮಾಡಿದ್ದಾನೆಂದು ಆರೋಪ ಮಾಡಿದ್ದಾಳೆ.
ಲಾಕ್‌ಡೌನ್ ಕಾರಣ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳಲಾಗ್ತಿದೆ. ಈ ಸಮಯದಲ್ಲಿ ವ್ಯಕ್ತಿಯೊಬ್ಬರು ಆನ್‌ಲೈನ್ ತರಗತಿಯನ್ನು ಹ್ಯಾಕ್ ಮಾಡಿದ್ದಾರೆ. ನಂತ್ರ ಅಶ್ಲೀಲವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
