Sunday, June 29, 2025
Homeಕರಾವಳಿಕಾಸರಗೋಡುಯೂಟ್ಯೂಬ್ ನೋಡಿ ಪ್ರಯೋಗ ಮಾಡುವ ಮುನ್ನ ಹುಷಾರ್: ಕೇರಳದಲ್ಲಿ ತಲೆಗೆ ಸೀಮೆಎಣ್ಣೆ ಹಾಕಿ ನೇರಗೊಳಿಸಲು...

ಯೂಟ್ಯೂಬ್ ನೋಡಿ ಪ್ರಯೋಗ ಮಾಡುವ ಮುನ್ನ ಹುಷಾರ್: ಕೇರಳದಲ್ಲಿ ತಲೆಗೆ ಸೀಮೆಎಣ್ಣೆ ಹಾಕಿ ನೇರಗೊಳಿಸಲು ಹೋಗಿ ಬಾಲಕ ಸಾವು

spot_img
- Advertisement -
- Advertisement -

ಕೇರಳ: ಸಾಮಾಜಿಕ ಜಾಲತಾಣಗಳಲ್ಲಿ ಬರೋ ವಿಡಿಯೋ ಗಳನ್ನು ಟ್ರೈ ಮಾಡುವ ಮುನ್ನ ಹತ್ತಾರು ಬಾರಿ ಯೋಚಿಸಬೇಕು. ಅಲ್ಲಿ ನೋಡಿದ್ದನ್ನೆಲ್ಲಾ ಮಾಡೋದಕ್ಕೆ ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

 ತಲೆಗೂದಲನ್ನು ನೇರಗೊಳಿಸಲು ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿಕೊಂಡಿರುವ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.

ಯೂಟ್ಯೂಬ್ ವಿಡಿಯೋ ಒಂದನ್ನು ನೋಡಿಕೊಂಡು ಬಾಲಕ ತಲೆ ಕೂದಲಿಗೆ ಸೀಮೆ ಎಣ್ಣೆ ಹಾಕಿ ಬೆಂಕಿಕಡ್ಡಿ ಬಳಸಿ ನೇರಗೊಳಿಸಲು ಮುಂದಾಗಿದ್ದಾನೆ ಆಗ ಬೆಂಕಿ ಹೊತ್ತಿಕೊಂಡ ಪರಿಣಾಮ ಯುವಕ ಮೃತಪಟ್ಟಿದ್ದಾನೆ.

ಮೃತ ಬಾಲಕನನ್ನು ಶಿವನಾರಾಯಣನ್ ಎಂದು ಗುರುತಿಸಲಾಗಿದ್ದು, 7ನೇ ತರಗತಿ ಓದುತ್ತಿದ್ದ ಎಂಬುದು ತಿಳಿದುಬಂದಿದೆ. ಸುಟ್ಟು ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಕೂದಲಿಗೆ ಸೀಮೆಎಣ್ಣೆ ಹೆಚ್ಚಿಕೊಂಡು ಬೆಂಕಿಕಡ್ಡಿ ಬಳಸಿ ಅದನ್ನು ನೇರಗೊಳಿಸಲು ಯತ್ನಿಸಿದ ಬಾಲಕ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾನೆ. ಬಾಲಕ ಮನೆಯಲ್ಲಿ ಪೋಷಕರಿಲ್ಲದ ಸಮಯದಲ್ಲಿ ಬಾತ್ ರೂಂನೊಳಗೆ ಈ ಕೆಲಸ ಮಾಡಿರುವುದಾಗಿ ಪೋಷಕರು ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!