Friday, June 5, 2026
Homeಕರಾವಳಿಕಡಬ: ಮನೆಯಿಂದ  ನಾಪತ್ತೆಯಾಗಿದ್ದ 10ನೇ ತರಗತಿ ಬಾಲಕ ನದಿಯಲ್ಲಿ ಶವವಾಗಿ ಪತ್ತೆ

ಕಡಬ: ಮನೆಯಿಂದ  ನಾಪತ್ತೆಯಾಗಿದ್ದ 10ನೇ ತರಗತಿ ಬಾಲಕ ನದಿಯಲ್ಲಿ ಶವವಾಗಿ ಪತ್ತೆ

- Advertisement -
- Advertisement -

ಕಡಬ: ಮನೆಯಿಂದ  ನಾಪತ್ತೆಯಾಗಿದ್ದ 10ನೇ ತರಗತಿ ಬಾಲಕ ಕುಮಾರಧಾರಾ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ನಾಕೂರು ಗಯದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಕೋಡಿಂಬಾಳ  ಗ್ರಾಮದ ಮಂಜುನಾಥ ಎಂಬವರ ಪುತ್ರ  10 ನೇ ತರಗತಿ ವಿದ್ಯಾರ್ಥಿ ಅದ್ವೈತ್ ಶೆಟ್ಟಿ ಮೃತ ಬಾಲಕ.

ಅದ್ವೈತ್ ಮಾ.29ರಿಂದ(ನಿನ್ನೆ) ಮನೆಯಿಂದ ನಾಪತ್ತೆಯಾದ ಹಿನ್ನೆಲೆ ಕುಟುಂಬಸ್ಥರು ತೀವ್ರ ಹುಟುಕಾಟ ನಡೆಸಿದ್ದರು. ಇಂದು  ಮುಂಜಾನೆ ವಿದ್ಯಾರ್ಥಿಯ  ಬ್ಯಾಗ್ ನಾಕೂರು ಗಯದ ಬಳಿ ಪತ್ತೆಯಾಗಿತ್ತು.

ಇದರಿಂದ ಅನುಮಾನಗೊಂಡು ಸ್ಥಳೀಯರ ಸಹಕಾರದೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಹುಟುಕಾಟ ಆರಂಭಿದ್ದರು.ಇದೀಗ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.

ಬಾಲಕ ಯಾಕೆ ನದಿಗೆ ಹಾರಿದ ಎಂಬುವುದಕ್ಕೆ  ನಿಖರ ಕಾರಣ ತಿಳಿದು ಬಂದಿಲ್ಲ.  ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!