Thursday, June 25, 2026
Homeತಾಜಾ ಸುದ್ದಿಸಿನಿಮಾದಲ್ಲಿ ಹೀರೋ ಸೋನು ಸೂದ್ ಗೆ ಹೊಡೆದ ಎಂದು ಟಿವಿಯನ್ನೇ ಪುಡಿ ಮಾಡಿದ ಬಾಲಕ

ಸಿನಿಮಾದಲ್ಲಿ ಹೀರೋ ಸೋನು ಸೂದ್ ಗೆ ಹೊಡೆದ ಎಂದು ಟಿವಿಯನ್ನೇ ಪುಡಿ ಮಾಡಿದ ಬಾಲಕ

- Advertisement -
- Advertisement -

ಮುಂಬೈ: ಸಿನಿಮಾದಲ್ಲಿ ‘ಹೀರೋ’ ವಿಲನ್ ಆಕ್ಟರ್ ಸೋನುಸೂದ್ ಗೆ ಹೊಡೆದ ಅಂತ ಬಾಲಕನೊಬ್ಬನು ಸಿಟ್ಟಿಗೆ ಟಿವಿಯನ್ನೇ ಪುಡಿ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

ದೂಕುಡು ಸಿನಿಮಾದಲ್ಲಿ ಹೀರೋ ಮಹೇಶ್ ಬಾಬು ಖಳನಟ ಸೋನು ಸೂದ್ ನನ್ನು ಸದೆಬಡಿಯುವ ದೃಶ್ಯವಿದೆ. ಇದನ್ನು ನೋಡಿದ ಬಾಲಕ ಸಿಟ್ಟಿಗೆದ್ದು ಟಿವಿಯನ್ನೇ ಜಖಂ ಮಾಡಿದ್ದಾನೆ. ಸದಾ ತಮ್ಮ ಒಳ್ಳೆಯ ಕೆಲಸಗಳಿಂದ, ಸಹಾಯ ಹಸ್ತ ಚಾಚುವ ಮೂಲಕ ನಿಜ ಜೀವನದಲ್ಲಿ ಕೂಡ ಸೂನುಸೂದ್ ರಿಯಲ್ ಹೀರೋ ಆಗಿದ್ದಾರೆ. ಅಷ್ಟೆಲ್ಲಾ ಜನಕ್ಕೆ ಸಹಾಯ ಮಾಡುವ ಅಷ್ಟು ಒಳ್ಳೆಯವರಿಗೇ ಈ ಹೀರೋ ಹೊಡೆಯುತ್ತಿದ್ದಾನಲ್ಲಾ ಎಂದು ಸಿಟ್ಟಿಗೆದ್ದ ಬಾಲಕ ಮನೆಯ ಟಿವಿಯನ್ನು ಕುಟ್ಟಿ ಪುಡಿ ಮಾಡಿದ್ದಾನೆ.

ಇನ್ನು ಬಾಲಕ ವಿರಾಟ್ ಟಿವಿ ಪುಡಿ ಮಾಡಿದ ವೀಡಿಯೋವನ್ನು ಸೋನು ಸೂದ್ ಟ್ವೀಟ್‍ನಲ್ಲಿ ಹಂಚಿಕೊಂಡಿದ್ದು, ಟಿವಿ ಪುಡಿ ಮಾಡಬೇಡ ಮಾರಾಯ. ನಿಮ್ಮ ತಂದೆ ನನಗೆ ಹೊಸ ಟಿವಿಯನ್ನು ತಂದು ಕೊಡಲು ಹೇಳುತ್ತಾರೆ ಎಂದು ಸೋನು ತಮಾಷೆ ಮಾಡಿದ್ದಾರೆ. ಸದ್ಯ ಅವರ ಈ ಟ್ವೀಟ್ ವೈರಲ್ ಆಗಿದೆ.

- Advertisement -

Latest News

error: Content is protected !!