Wednesday, April 14, 2021
Home ಕರಾವಳಿ ಕರಾವಳಿಯಲ್ಲಿ ಹೆಚ್ಚಾಗ್ತಿದೆ ಪಬ್ ಜಿ ಆಟದ ಗೀಳು: ಉಪ್ಪಿನಂಗಡಿಯಲ್ಲಿ ಪಬ್ ‌ಜಿಗಾಗಿ ಕೂದಲು ಕತ್ತರಿಸಿಕೊಂಡ ಬಾಲಕ

ಕರಾವಳಿಯಲ್ಲಿ ಹೆಚ್ಚಾಗ್ತಿದೆ ಪಬ್ ಜಿ ಆಟದ ಗೀಳು: ಉಪ್ಪಿನಂಗಡಿಯಲ್ಲಿ ಪಬ್ ‌ಜಿಗಾಗಿ ಕೂದಲು ಕತ್ತರಿಸಿಕೊಂಡ ಬಾಲಕ

- Advertisement -
- Advertisement -

ಉಪ್ಪಿನಂಗಡಿ: ಉಳ್ಳಾಲದಲ್ಲಿ ಪಬ್ ‌ಜಿ ಆಟಕ್ಕೆ ಬಾಲಕನೊಬ್ಬ ಬಲಿಯಾದ ಬೆನ್ನಲ್ಲೇ ಉಪ್ಪಿನಂಗಡಿ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಪಬ್‌ ಜಿ ಪ್ರೀ ಪೈಯರ್ ಗೇಮ್ ಆಡಿಕೊಂಡು ತಲೆ ಕೂದಲನ್ನು ಕತ್ತರಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯೋರ್ವನ ತಲೆ ಕೂದಲನ್ನು ವಿಕಾರವಾಗಿ ಕತ್ತರಿಸಿಕೊಂಡಿದ್ದ.  ಹೆತ್ತವರು ಗಮನಿಸಿ ಆತನನ್ನು ಪ್ರಶ್ನಿಸಿದ್ದಾರೆ. ಸುಳ್ಳು ಕತೆ ಕಟ್ಟಿ ಹೇಳುತ್ತಿರುವುದನ್ನು ಮನಗಂಡ ಹೆತ್ತವರು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಕೊನೆಗೆ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ತಾನು ಪಬ್‌ ಜಿ ಆಟವಾಡುತ್ತಾ ಫ್ರೀ ಪೈಯರ್ ಆನ್‌ಲೈನ್ ಆಟದಡಿ ಮೊಬೈಲ್ ಮುಂಭಾಗದಲ್ಲಿ ತಲೆ ಕೂದಲು ಕತ್ತರಿಸಿಕೊಂಡಿರುವುದಾಗಿ ತಿಳಿಸಿದ್ದಾನೆ.

ವಿದ್ಯಾರ್ಥಿಯ ಈ ಕೃತ್ಯಕ್ಕೆ ಕಂಗೆಟ್ಟ ಪೋಷಕರು ಈ ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಗೇಮ್ ಹಿಂದೆ ಇನ್ನಷ್ಟು ಮಕ್ಕಳು ಭಾಗಿಯಾಗಿರುವುದು ಕಂಡುಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಈ ಆಟದಲ್ಲಿ ಭಾಗಿಯಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

- Advertisement -
- Advertisment -

Latest News

error: Content is protected !!