Thursday, June 4, 2026
Homeತಾಜಾ ಸುದ್ದಿಭಾರತಕ್ಕೆ ಆಗಮಿಸಿದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್

ಭಾರತಕ್ಕೆ ಆಗಮಿಸಿದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್

- Advertisement -
- Advertisement -

ಅಹಮದಾಬಾದ್ ಎರಡು ದಿನಗಳ ಭಾರತ ಭೇಟಿಗಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಗಮಿಸಿದ್ದಾರೆ. ಇಂದು ಬೆಳಗ್ಗೆ ಬೋರಿಸ್ ಜಾನ್ಸನ್ ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಗುಜರಾತ್ ರಾಜ್ಯಪಾಲ ಆಚಾರ್ಯ ದೇವ್ರತ್, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜಾನ್ಸನ್ ಸ್ವಾಗತಿಸಿದ್ದಾರೆ.

ಇಂದು ಅಹಮದಾಬಾದ್‌ನಲ್ಲಿ ಉದ್ಯಮಿಗಳ ಜೊತೆ ಮಾತುಕತೆ ನಡೆಸಲಿರುವ ಬೋರಿಸ್ ಜಾನ್ಸನ್ ಬಳಿಕ ದೆಹಲಿಗೆ ತೆರಳಲಿದ್ದಾರೆ. ಇನ್ನು ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬೋರಿಸ್ ಜಾನ್ಸನ್ ರಕ್ಷಣೆ, ರಾಜತಾಂತ್ರಿಕ ಸಂಬಂಧ, ಆರ್ಥಿಕ ಸಹಭಾಗಿತ್ವದ ಕುರಿತು ಮಾತುಕತೆಗಳನ್ನು ನಡೆಸಲಿದ್ದಾರೆ.

- Advertisement -

Latest News

error: Content is protected !!