Friday, December 6, 2024
Homeತಾಜಾ ಸುದ್ದಿಪತ್ರಿಕೆಗಳ ಬಗ್ಗೆ ಮಹಾ ಹೇಳಿಕೆ : ಹೈಕೋರ್ಟ್ ಗರಂ

ಪತ್ರಿಕೆಗಳ ಬಗ್ಗೆ ಮಹಾ ಹೇಳಿಕೆ : ಹೈಕೋರ್ಟ್ ಗರಂ

spot_img
- Advertisement -
- Advertisement -

ಮುಂಬಯಿ: ಪತ್ರಿಕೆಗಳಿಂದ ಕೊರೊನ ಹರಡುತ್ತದೆ ಎಂದು ಹೇಳಿದ್ದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠ ಏ.27 ರಂದು ಗರಂ ಆಗಿದೆ. ತಜ್ಞರ ಅಭಿಪ್ರಾಯದ ಹೊರತು ನಿಮ್ಮಿಷ್ಟ ಬಂದಂತೆ ಹೇಗೆ ಹೇಳಿಕೆ ನೀಡಿದಿರಿ ಎಂದು ಕಿಡಿಕಾರಿದೆ .

ಕೊರೊನ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪತ್ರಿಕೆಗಳನ್ನು ಮನೆಗಳಿಗೆ ಹಂಚುವುದನ್ನು ನಿರ್ಬಂಧಿಸಿ ಮಹಾರಾಷ್ಟ್ರ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ ನ್ಯಾ.ಪ್ರಸನ್ನ ಬಿ. ವರಾಲೆ, ಈ ಕುರಿತು ಸರ್ಕಾರದ ನಿಲುವು ಕೋರಿದ್ದರು. ಸೋಮವಾರ ಸರ್ಕಾರವು ಅಫಿಡವಿಟ್‌ ಸಲ್ಲಿಸಿ, ವೈರಸ್‌ ಒಂದೊಂದು ವಸ್ತುಗಳಲ್ಲಿ ನಿರ್ದಿಷ್ಟ ಸಮಯದವರೆಗೆ ಉಳಿಯುತ್ತವೆ. ಪತ್ರಿಕೆಗಳು ಒಬ್ಬರ ಕೈಯಿಂದ ಮತ್ತೂಬ್ಬರ ಕೈಗೆ ಹೋಗುವಾಗ ವೈರಸ್‌ ಹಬ್ಬುವ ಸಾಧ್ಯತೆಯಿರುತ್ತದೆ’ ಎಂದು ತಿಳಿಸಿತ್ತು . ಈ ಸ್ಪಷ್ಟನೆಯಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು, ನಿಮ್ಮ ಹೇಳಿಕೆ ಹಿಂದಿನ ಮರ್ಮ ಅರ್ಥವಾಗುತ್ತಿಲ್ಲ. ನೀವು ಅಫಿಡವಿಟ್‌ ನಲ್ಲಿ ಎಲ್ಲೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು ಅಥವಾ ಪರಿಣತರ ಅಭಿಪ್ರಾಯ, ಹೇಳಿಕೆಯನ್ನು ನಮೂದಿಸಿಲ್ಲ . ಆದರೆ, ಮತ್ತೂಂದೆಡೆ ಅನೇಕ ಪರಿಣತರು ಪತ್ರಿಕೆಗಳ ಮೂಲಕ ಕೋವಿಡ್ ಹರಡಲ್ಲ ಎಂದು ಹೇಳಿರುವುದು ಹಲವು ಪತ್ರಿಕೆಗಳಲ್ಲಿ ವರದಿಯಾಗಿವೆ’ ಎಂದರು.

ಜತೆಗೆ, ತಮ್ಮೆಲ್ಲ ಸಂದೇಹಗಳಿಗೂ ಉತ್ತರ ಸಿಗುವಂತೆ ಹೆಚ್ಚುವರಿ ಅಫಿಡವಿಟ್‌ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾ.ವರಾಲೆ, ಮುಂದಿನ ವಿಚಾರಣೆಯಲ್ಲಿ ಜೂ.11ಕ್ಕೆ ಮುಂದೂಡಿದರು. ಏ.18ರಂದು ಲಾಕ್‌ ಡೌನ್‌ ಗೆ ಸಂಬಂಧಿಸಿದ ಮಾರ್ಗಸೂಚಿ ಹೊರಡಿಸಿದ್ದ ಮಹಾರಾಷ್ಟ್ರ ಸರ್ಕಾರ, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಮನೆ ಮನೆಗೆ ತಲುಪಿಸುವುದಕ್ಕೆ ನಿರ್ಬಂಧ ಹೇರಿತ್ತು. ಈ ನಿರ್ಧಾರಕ್ಕೆ ಸಂಬಂಧಿಸಿ ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಏ.21ರಂದು ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಆದೇಶಿಸಿತ್ತು. ಜತೆಗೆ, ಈ ವಿಚಾರದಲ್ಲಿ ಕೋರ್ಟ್‌ ಗೆ ಸಲಹೆ ನೀಡಲು ವಕೀಲ ಸತ್ಯಜಿತ್‌ ಬೋರಾ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿಯೂ ನೇಮಕ ಮಾಡಿತ್ತು. ಅದೇ ದಿನ, ಮಹಾರಾಷ್ಟ್ರ ಸರ್ಕಾರವು ಮುಂಬೈ ಮೆಟ್ರೋಪಾಲಿಟನ್‌ ಪ್ರದೇಶ ಮತ್ತು ಪುಣೆ ಹೊರತು ಪಡಿಸಿ ಉಳಿದ ಕಡೆ ಪತ್ರಿಕೆಗಳ ವಿತರಣೆಗೆ ಅವಕಾಶ ನೀಡಿತ್ತು.

- Advertisement -
spot_img

Latest News

error: Content is protected !!