Sunday, June 7, 2026
Homeತಾಜಾ ಸುದ್ದಿನಟಿ ರಿಯಾ ಚಕ್ರವರ್ತಿಗೆ ಷರತ್ತುಬದ್ಧ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

ನಟಿ ರಿಯಾ ಚಕ್ರವರ್ತಿಗೆ ಷರತ್ತುಬದ್ಧ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

- Advertisement -
- Advertisement -

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಜಾಲದ ನಂಟಿನ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ನಟಿ ರಿಯಾ ಚಕ್ರವರ್ತಿಗೆ ಬರೋಬ್ಬರಿ ಒಂದು ತಿಂಗಳ ನಂತರ ಬಾಂಬೆ ಹೈಕೋರ್ಟ್ ಇಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಮುಂಬೈ ಬಿಟ್ಟು ಹೊರಹೋಗುವಂತಿಲ್ಲ ಎಂಬ ಷರತ್ತುನ್ನು ಕೋರ್ಟ್ ಹಾಕಿದ್ದು, 28 ದಿನಗಳ ಬಳಿಕ ರಿಯಾ ಚಕ್ರವರ್ತಿ ಜೈಲಿನಿಂದ ಹೊರಬರಲಿದ್ದಾರೆ. ರಿಯಾ ಚಕ್ರವರ್ತಿಗೆ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಸಿಕ್ಕಿದೆ. ಅಲ್ಲದೆ ರಿಯಾ ಬಿಡುಗಡೆಯಾದ ನಂತರ 10 ದಿನಗಳ ಕಾಲ ಪೊಲೀಸ್ ಠಾಣೆಗೆ ಬಂದು ಹಾಜರಾತಿಗೆ ಸಹಿ ಮಾಡಬೇಕು.

ಜೂನ್ 14ರಂದು ಮುಂಬೈನ ಅಪಾರ್ಟ್ ಮೆಂಟ್ ನಲ್ಲಿ ನಟ ಸುಶಾಂತ್ ಸಿಂಗ್ ಶವ ಪತ್ತೆಯಾಗಿತ್ತು. ಸುಶಾಂತ್ ಸಾವಿನ ಹಿಂದೆ ಡ್ರಗ್ಸ್ ಜಾಲದ ನಂಟಿನ ಆರೋಪ ಕೇಳಿಬಂದಿತ್ತು. ನಟ ಸುಶಾಂತ್ ಸಿಂಗ್ ಸಾವು ಹಾಗೂ ಡ್ರಗ್ಸ್ ಜಾಲದ ನಂಟಿನ ಆರೋಪದಲ್ಲಿ ರಿಯಾ ಚಕ್ರವರ್ತಿ, ಸಹೋದರ ಶೋವಿಕ್ ಚಕ್ರವರ್ತಿ ಕಳೆದ ಒಂದು ತಿಂಗಳಿನಿಂದ ಜೈಲಿನಲ್ಲಿದ್ದರು.

- Advertisement -

Latest News

error: Content is protected !!