Thursday, June 4, 2026
Homeತಾಜಾ ಸುದ್ದಿಎಬಿಸಿಡಿ' ಸಿನಿಮಾ ನಿರ್ದೇಶಕ ರೆಮೋ ಡಿಸೋಜಾಗೆ ತೀವ್ರ ಹೃದಯಾಘಾತ

ಎಬಿಸಿಡಿ’ ಸಿನಿಮಾ ನಿರ್ದೇಶಕ ರೆಮೋ ಡಿಸೋಜಾಗೆ ತೀವ್ರ ಹೃದಯಾಘಾತ

- Advertisement -
- Advertisement -

ನವದೆಹಲಿ: ನೃತ್ಯ ನಿರ್ದೇಶಕ ಹಾಗೂ ನಿರ್ದೇಶಕ ರೆಮೋ ಡಿಸೋಜಾ ಅವರು ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ.

46 ವರ್ಷದ ರೆಮೋ ಡಿಸೋಜಾಕೊಕಿಲಾಬೆನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಆಂಜಿಯೋಗ್ರಫಿ ಮಾಡಿದ್ದಾರೆ. ರೆಮೋ ಡಿಸೋಜಾ ಸದ್ಯ ಸ್ಥಿರ ಮತ್ತು ನಿಗಾದಲ್ಲಿದ್ದಾರೆ ಎಂದು ಅವರ ಕುಟುಂಬದ ಆಪ್ತಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.

ಸದ್ಯಕ್ಕೆ ವೈದ್ಯರು ಆಂಜಿಯೋಗ್ರಫಿ ಮಾಡಿದ್ದು, ಸದ್ಯ ಐಸಿಯುನಲ್ಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಕಿಕ್, ಝೀರೋ, ಬಾಜಿರಾವ್ ಮಸ್ತಾನಿ, ಭಜರಂಗಿ ಭಾಯಿಜಾನ್, ಯೇ ಜವಾನಿ ಹೈ ದಿವಾನಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿರುವ ರೆಮೋ ಡಿ ಸೋಜಾ ಖ್ಯಾತ ನೃತ್ಯ ನಿರ್ದೇಶಕರಾಗಿದ್ದಾರೆ.ಡ್ಯಾನ್ಸ್ ಇಂಡಿಯಾ ಡಾನ್ಸ್, ಡ್ಯಾನ್ಸ್ ಪ್ಲಸ್ ಮತ್ತು ಝಲಕ್ ದಿಖ್ಲಾ ಜಾ ಮುಂತಾದ ಡ್ಯಾನ್ಸ್ ರಿಯಾಲಿಟಿ ಶೋಗಳ ತೀರ್ಪುಗಾರರಲ್ಲಿ ಇವರು ಒಬ್ಬರು. ಬಾಜಿರಾವ್ ಮಸ್ತಾನಿ ಚಿತ್ರದ ಡಿಸ್ಕೋ ದೀವಾನೆ, ಬಟ್ಟಮೀಜ್ ದಿಲ್, ಬಾಲಂ ಪಿಚ್ಚರಿ, ದೀವಾನಿ ಮಸ್ತಾನಿ ಮುಂತಾದ ಹಿಟ್ ಹಾಡುಗಳಿಗೆ ರೆಮೋ ಡಿಸೋಜಾ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

- Advertisement -

Latest News

error: Content is protected !!