ಕುಂದಾಪುರ: ಅಪರಿಚಿತ ದುಷ್ಕರ್ಮಿಗಳು ಮಂಗಗಳನ್ನು ಹತ್ಯೆಗೈದು ಹೆಬ್ರಿ ನಾಡ್ಪಾಲು ಗ್ರಾಮದ ಸೋಮೇಶ್ವರ ಮಡಾಮಕ್ಕಿ ಮಾರ್ಗದ ಕಂಡಿ ಕಲ್ಲು ಎಂಬಲ್ಲಿ ರಸ್ತೆ ಬದಿಯ ಅಭಯಾರಣ್ಯದಲ್ಲಿ ಎಸೆದು ಹೋಗಿರುವ ಪ್ರಕರಣ ನಡೆದಿದೆ.
ಮಾರ್ಗಮಧ್ಯದಲ್ಲಿ ಹೀನಾಯವಾಗಿ ಅನೇಕ ಮಂಗಗಳನ್ನು ಸಾಯಿಸಿ ಎರಡು ಗೋಣಿ ಚೀಲದಲ್ಲಿ ತುಂಬಿ ರಸ್ತೆ ಬದಿಯಲ್ಲಿ ಎಸೆದಿ ದ್ದು ಮುಖ ಪ್ರಾಣಿಗಳ ಮೇಲೆ ಈ ರೀತಿಯಾಗಿ ಬೀಭತ್ಸತೆ ಮೆರೆದಿರುವ ಕಿರಾಟಕರ ಬಗ್ಗೆ ಯಾಪಕ ಆಕ್ರೋಶ ವ್ಯಕ್ತವಾಗುತಲಿದೆ.
ಅದರಲ್ಲೂ ಕಣ್ಣು ತೆರೆದ ಪುಟ್ಟ ಮಂಗನ ಮರಿ ತಾಯಿಯ ಬಿಸಿ ಅಪ್ಪುಗೆಯಲ್ಲಿ ತಾಯಿಯೊಂದಿಗೆ ಪ್ರಾಣ ಬಿಟ್ಟಿದೆ, ಮಾನವನ ದೌರ್ಜನ್ಯಕ್ಕೆ ಬಲಿಯಾದ ಮಂಗಗಳ ಮೃತದೇಹ ಗೋಣಿಚೀಲದದಿಂದ ಎಸೆದ ರಭಸಕ್ಕೆ ಕೆಲವು ರಸ್ತೆ ಬದಿಯಲ್ಲಿ ಬಿದ್ದಿದೆ ಮತ್ತೆ ಹಲವಾರು ಮೃತದೇಹ ಗೋಣಿಚೀಲದಲ್ಲಿದೆ. ಹೆಬ್ರಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಭಾಗಗಳಲ್ಲಿ ಇತ್ತೀಚೆಗೆ ಕೃಷಿ ತೋಟಗಳಿಗೆ ಕಾಡು ಮಂಗಗಳ ಹಾವಳಿ ದಿನೇದಿನೇ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಯಾರೋ ಕೃಷಿಕರ ಕೆಂಗಣ್ಣಿಗೆ ತುತ್ತಾಗಿರುವ ಮಂಗಗಳು ಸಾವಿನಪ್ಪಿವೆ ಎಂದು ಕೇಳಿಬಂದಿದೆ


