- Advertisement -
- Advertisement -
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಕೆನರಾ ಬ್ಯಾಂಕ್ ಸಿಬ್ಬಂದಿಯ ಉದ್ದಟತನದ ಸೇವಾ ವೈಖರಿ, ಅವ್ಯವಹಾರ ಮತ್ತು ಪ್ರಾಮಾಣಿಕ ಚಿನ್ನಪರಿಶೋಧಕರಾಗಿದ್ದ ಪದ್ಮನಾಭ ಆಚಾರ್ಯ ರವರವರನ್ನು ಏಕಾಏಕಿ ಕೈ ಬಿಟ್ಟಿರುವ ಕ್ರಮವನ್ನು ರದ್ದು ಪಡಿಸಿ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಬೆಂಗಳೂರಿಗೆ ತೆರಳಿ ಬ್ಯಾಂಕಿನ ರಾಜ್ಯ ಪ್ರಧಾನ ವ್ಯವಸ್ಥಾಪಕರಿಗೆ ಹೋರಾಟ ಸಮಿತಿ ಪರವಾಗಿ ಕಾರ್ಮಿಕ ಮುಖಂಡ ಬಿ ಎಂ ಭಟ್ ರವರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೊಕ್ಕಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹೋರಾಟ ಸಮಿತಿ ಸಂಚಾಲಕರಾದ ಸುಬ್ರಮಣ್ಯ ಶಬರಾಯ ಉಪಸ್ಥಿತರಿದ್ದರು.
- Advertisement -