Friday, June 5, 2026
Homeಕರಾವಳಿವಿಟ್ಲ: ಬಸ್ ನಿಲ್ದಾಣದಲ್ಲಿ ರಕ್ತ ಕಲೆ ಪತ್ತೆ ಪ್ರಕರಣ: ಕುಡುಕನ ಅವಾಂತರವೇ ಇಷ್ಟಕ್ಕೆಲ್ಲಾ ಕಾರಣ!  

ವಿಟ್ಲ: ಬಸ್ ನಿಲ್ದಾಣದಲ್ಲಿ ರಕ್ತ ಕಲೆ ಪತ್ತೆ ಪ್ರಕರಣ: ಕುಡುಕನ ಅವಾಂತರವೇ ಇಷ್ಟಕ್ಕೆಲ್ಲಾ ಕಾರಣ!  

- Advertisement -
- Advertisement -

ವಿಟ್ಲ : ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ರಕ್ತದ ಕಲೆ ಪತ್ತೆಯಾಗಿ ಸಾಕಷ್ಟು ಆತಂಕ ಮೂಡಿಸಿತ್ತು. ಅಲ್ಲದೇ ಬೇರೆ ಬೇರೆ ರೀತಿಯ ಅನುಮಾನಗಳು ವ್ಯಕ್ತವಾಗುವಂತೆ ಮಾಡಿತ್ತು. ಇದೀಗ ಪ್ರಕರಣಕ್ಕೆ ಪೊಲೀಸರು ತಿಲಾಂಜಲಿ ಹಾಡಿದ್ದಾರೆ. ಕುಡುಕನ ಅವಾಂತರವೇ ಇಷ್ಟಕ್ಕೆಲ್ಲಾ ಕಾರಣ ಅನ್ನೋದು ಬಯಲಾಗಿದೆ.

ಕುಡಿದ ಮತ್ತಿನಲ್ಲಿ ಹಂಝು ಎಂಬಾತ ಬಸ್ ನಿಲ್ದಾಣದಲ್ಲಿ ಬಿದ್ದು ಮುಖಕ್ಕೆ ಹಾಗೂ ತಲೆಗೆ ಗಾಯವಾಗಿತ್ತು. ಆತ ಅಲ್ಲಿಯೇ ಬಿದ್ದಿದ್ದ ಕಾರಣ ರಕ್ತದ ಕಲೆಗಳಿದ್ದವು. ಇಂದು ಬೆಳಗ್ಗೆ ಎದ್ದು ರಕ್ತವನ್ನು ನೋಡಿ ಜನ ಭಯಗೊಂಡಿದ್ದಾರೆ. ಅಲ್ಲದೇ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ಮಾಹಿತಿ ನೋಡಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು  ಕುಡುಕನ ಅವಾಂತರವೇ ಇಷ್ಟಕ್ಕೆಲ್ಲಾ ಕಾರಣ ಅಂತಾ ಜನರ ಆತಂಕ ನಿವಾರಿಸಿದ್ದಾರೆ.

- Advertisement -

Latest News

error: Content is protected !!