Friday, June 5, 2026
Homeಕರಾವಳಿಮಂಗಳೂರುವಿಟ್ಲ: ಹೆಣ್ಣು ನೋಡೋ ನೆಪದಲ್ಲಿ ಫೋಟೋ, ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ ಮಾಡಿ 44.80 ಲಕ್ಷ...

ವಿಟ್ಲ: ಹೆಣ್ಣು ನೋಡೋ ನೆಪದಲ್ಲಿ ಫೋಟೋ, ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ ಮಾಡಿ 44.80 ಲಕ್ಷ ರೂ ವಂಚನೆ

- Advertisement -
- Advertisement -

ವಿಟ್ಲ: ಹೆಣ್ಣು ನೋಡೋ ನೆಪದಲ್ಲಿ ಫೋಟೋ, ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ ಮಾಡಿ 44.80 ಲಕ್ಷ ರೂ ವಂಚನೆ ಮಾಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ.

ಮೂಲತಃ ಕೇರಳದವರಾದ ಸದ್ಯ ಸೌದಿಯಲ್ಲಿ ಉದ್ಯೋಗದಲ್ಲಿರುವ ಮಹಮ್ಮದ್ ಅಶ್ರಫ್ ತಾವರಕಡನ್ (53) ಎಂಬವರು 2024ರ ಸೆಪ್ಟೆಂಬರ್‌ನಲ್ಲಿ ಮದುವೆಯ ಸಲುವಾಗಿ ಮಂಗಳೂರಿಗೆ ಬಂದಿದ್ದರು. ಅವರನ್ನು ಅಲ್ಲಿಗೆ ಕರೆಸಿದ ಬಶೀರ್, ಸಫಿಯಾ ಮತ್ತು ಇತರ ಆರೋಪಿಗಳು  ಹೆಣ್ಣು ನೋಡೋ ನೆಪದಲ್ಲಿ ಅವರ ಫೋಟೋ, ವಿಡಿಯೋ ತೆಗೆದು, ನಂತರ ಅವುಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ 44.80 ಲಕ್ಷ ರೂಪಾಯಿ ಹಣ ವಂಚಿಸಿದ್ದಾರೆ ಎಂದು ಮಹಮ್ಮದ್ ಅಶ್ರಫ್ ಅವರು ವಿಟ್ಲ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದು, ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

- Advertisement -

Latest News

error: Content is protected !!