Wednesday, June 24, 2026
Homeಅಪರಾಧಬಂಟ್ವಾಳ: ಸಂಬಂಧಿಕರ ಮಹಿಳೆಯರ ಜೊತೆ ಸಂಪರ್ಕ ಬೆಳೆಸಿ ಬಳಿಕ ಹಣಕ್ಕಾಗಿ ಬ್ಲ್ಯಾಕ್ ಮೇಲ್- ಆರೋಪಿ ಅರೆಸ್ಟ್

ಬಂಟ್ವಾಳ: ಸಂಬಂಧಿಕರ ಮಹಿಳೆಯರ ಜೊತೆ ಸಂಪರ್ಕ ಬೆಳೆಸಿ ಬಳಿಕ ಹಣಕ್ಕಾಗಿ ಬ್ಲ್ಯಾಕ್ ಮೇಲ್- ಆರೋಪಿ ಅರೆಸ್ಟ್

- Advertisement -
- Advertisement -

ಬಂಟ್ವಾಳ: ಸಂಬಂಧಿಕರ ಮಹಿಳೆಯರ ಜೊತೆ ರಾಸಲೀಲೆ ಮಾಡಿದ ಬಳಿಕ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಬಂಟ್ವಾಳ ಮಂಡಾಡಿ ನಿವಾಸಿ ರಾಧಾಕೃಷ್ಣ ಬಂಧಿತ ಆರೋಪಿಯಾಗಿದ್ದು, ಬಂಟ್ವಾಳ ದಲ್ಲಿ ಬಂಧಿಸಲಾಗಿದೆ.

ಬಂಟ್ವಾಳ ಬಿ.ಕಸ್ಬಾ ಗ್ರಾಮದ ನಿತ್ಯಾನಂದ ನಗರದ ನಿವಾಸಿ ಮಹಿಳೆಯೋರ್ವಳ ನಗ್ನ ಪೋಟೋ ಗಳನ್ನು ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯ ಗಂಡ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ಬೆನ್ನು ಹತ್ತಿ ಆರೋಪಿಯನ್ನು ಬಂಧಿಸಿದಾಗ ಈತನ ಬಣ್ಣ ಬಯಲಾಗಿದೆ.

ಮಹಿಳೆಯ ನಗ್ನ ಪೋಟೋ ತೆಗೆದಿದ್ದ ಆರೋಪಿ ರಾಧಾಕೃಷ್ಣ ಕಳೆದ ಕೆಲ ದಿನಗಳಿಂದ 4.48 ಲಕ್ಷ ರೂ ನೀಡುವಂತೆ ಪೀಡಿಸುತ್ತಿದ್ದ, ಹಣ ನೀಡದಿದ್ದರೆ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸಿದ್ದ, ಅ ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿ ಸುಮ್ಮನಾಗಿದ್ದ. ಬಳಿಕ ಮಹಿಳೆಯ ಗಂಡನ ಬಳಿ ಪೋಟೋ ತೋರಿಸಿ ಹಣ ನೀಡುವಂತೆ ಹೆದರಿಸಿ ಹೋಗಿ, ಎರಡು ದಿನಗಳ ಬಳಿಕ 17 ಜನ ಸಂಬಂಧಿಕರ ಗ್ರೂಪ್ ಮಾಡಿ ಅದರಲ್ಲಿ ಸಂತ್ರಸ್ತ ಮಹಿಳೆಯ ಗಂಡನನ್ನು ಸೇರಿಸಿ ಅಶ್ಲೀಲ ಚಿತ್ರಗಳನ್ನು ಶೇರ್ ಮಾಡಿದ್ದ. ಈ ಬಗ್ಗೆ ಸಂತ್ರಸ್ತ ಮಹಿಳೆಯ ಗಂಡ ದೂರು ನೀಡಿದ್ದರು.

ಆರೋಪಿ ರಾಧಾಕೃಷ್ಣ ನ ಜೊತೆ 10 ಕ್ಕೂ ಅಧಿಕ ಸಂಬಂಧಿಕ ಮದುವೆಯಾದ ಮಹಿಳೆಯರು ಹಾಗೂ ಇತರ ಮಹಿಳೆಯರು ರಾಸಲೀಲೆಯಲ್ಲಿ ತೊಡಗಿಕೊಂಡಿದ್ದಾರೆ. ಮದುವೆಯಾದ ಮಹಿಳೆಯರು ಅದರಲ್ಲಿ ಸಂಬಂಧಿಕ ಮಹಿಳೆಯರೇ ಈತನ ಟಾರ್ಗೆಟ್. ಸಂಬಂಧಿಕ ಮಹಿಳೆಯರನ್ನು ಲಾಡ್ಜ್ ಗಳಿಗೆ ಕೊಂಡು ಹೋಗಿ ಮಜಾ ಮಾಡುವುದೇ ಈತನ ಹುಚ್ಚು.

- Advertisement -

Latest News

error: Content is protected !!