Friday, June 5, 2026
Homeಕರಾವಳಿಸುಳ್ಯದ ಕೊಯನಾಡಿನಲ್ಲಿ ಅರಣ್ಯ ಇಲಾಖೆ ಜೀಪ್ ನಲ್ಲಿ ಪತ್ತೆಯಾಯ್ತು 15 ಅಡಿ ಉದ್ದದ ಕಾಳಿಂಗ ಸರ್ಪ

ಸುಳ್ಯದ ಕೊಯನಾಡಿನಲ್ಲಿ ಅರಣ್ಯ ಇಲಾಖೆ ಜೀಪ್ ನಲ್ಲಿ ಪತ್ತೆಯಾಯ್ತು 15 ಅಡಿ ಉದ್ದದ ಕಾಳಿಂಗ ಸರ್ಪ

- Advertisement -
- Advertisement -

ಸುಳ್ಯ: ಕರ್ತವ್ಯ ನಿಮಿತ್ತ ಕೊಯನಾಡು ಮೀಸಲು ಅರಣ್ಯದ ನರ್ಸರಿ ಬಂದಿದ್ದ ಅರಣ್ಯ ಇಲಾಖೆಯ ಜೀಪಿನೊಳಗೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡ ಘಟನೆ ಕೊಯನಾಡಿನಲ್ಲಿ ನಡೆದಿದೆ.

ಜೀಪಿನ ಡೀಸಲ್ ಟ್ಯಾಂಕ್ ಬಳಿ ಸೇರಿಕೊಂಡ ಅಂದಾಜು 15 ಅಡಿ ಉದ್ದ ಹಾವಿನ ಬಾಲ ಹೊರಭಾಗದಲ್ಲಿ ಕಾಣುತ್ತಿತ್ತು. ಕೂಡಲೇ ಉರಗ ತಜ್ಞರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ ಪಿಯುಶ್ ಮತ್ತು ಅವರ ತಂಡ ಸತತ 2 ಗಂಟೆಗಳ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಹೊರ ತೆಗೆದು ಅರಣ್ಯಕ್ಕೆ ಬಿಟ್ಟಿದ್ದಾರೆ.

- Advertisement -

Latest News

error: Content is protected !!