ಬಿಳಿನೆಲೆ: ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆಯ ಯುವಕನೊಂದಿಗೆ ಅಪರಿಚಿತ ಯುವತಿಯೊಬ್ಬಳು ರಾತ್ರಿಯ ವಿಡಿಯೋ ಚಾಟ್ ಮಾಡಿ ಅದರ ವಿಡಿಯೋ ರೆಕಾರ್ಡ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋ ಕಾಲ್ ನಲ್ಲಿ ಬಟ್ಟೆ ಬಿಚ್ಚಿದ ಯುವಕ ಬಿಳಿನೆಲೆಯ ಆಟೋ ಚಾಲಕ ಎಂದು ಸುದ್ದಿ ಹಬ್ಬಿದೆ. ಇದು ಹನಿಟ್ರ್ಯಾಪ್ ಪ್ರಕರಣವಾಗಿದ್ದು, ಅಪರಿಚಿತ ಯುವತಿಯೋರ್ವಳು ಈ ಯುವಕನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡು ವಿಡಿಯೋ ಕಾಲ್ ಮೂಲಕ ಇಬ್ಬರು ಬೆತ್ತಲಾಗಿದ್ದರೆ.
ನಂತರ ಬ್ಲಾಕ್ ಮೆಲ್ ಶುರುಮಾಡಿದ ಯುವತಿ ಬಾರಿ ಹಣ ನೀಡಲು ಬೇಡಿಕೆ ಇಟ್ಟಿದ್ದಾಳೆ. ಹಣ ನೀಡಲು ಯುವಕ ಒಪ್ಪದಿದ್ದಾಗ ಯುವಕನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.
ಇದರ ಹಿಂದೆ ದೊಡ್ಡ ಜಾಲವೊಂದು ಕಾರ್ಯನಿರ್ವಹಿಸುತ್ತಿದ್ದು, ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿದರೆ, ಯುವತಿಯ ವಿಡಿಯೋದಲ್ಲಿ ಪೋರ್ನ್ ಸೈಟ್ ಒಂದರ ವಾಟರ್ ಮಾರ್ಕ್ ಕಾಣಿಸುತ್ತಿದೆ. ಬಿಳಿನೆಲೆಯ ಯುವಕನಿಗೆ ಇದು ಲೈವ್ ವಿಡಿಯೋ ಕಾಲ್ ಎಂದು ನಂಬಿಸಿ, ಆತನನ್ನು ಬೆತ್ತಲಾಗುವಂತೆ ಪ್ರಚೋದಿಸಲಾಗಿದೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಬಡಪಾಯಿ ಆಟೋಚಾಲಕನ ಮಾನ ಹರಾಜಾಗಿದೆ.