Wednesday, May 15, 2024
Homeಅಪರಾಧಮಂಗಳೂರಿನಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ನಾಲ್ವರ ವಿರುದ್ಧ ಕ್ರಮ  

ಮಂಗಳೂರಿನಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ನಾಲ್ವರ ವಿರುದ್ಧ ಕ್ರಮ  

spot_img
- Advertisement -
- Advertisement -

ಮಂಗಳೂರು: ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರ ವಿರುದ್ಧ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾ.1ರಿಂದ 6ರವರೆಗೆ ನೋಂದಣಿ ಸಂಖ್ಯೆ ಇಲ್ಲದ ಬೈಕ್‌ನಲ್ಲಿ ಇಲ್ಯಾಸ್ ಝಿಯಾನ್ ಎಂಬಾತ ಇಬ್ಬರನ್ನು ಕುಳ್ಳಿರಿಸಿಕೊಂಡು ತೊಕ್ಕೊಟ್ಟು ಓವರ್ ಬ್ರಿಡ್ಜ್‌ನಿಂದ ಉಳ್ಳಾಲಬೈಲ್‌ವರೆಗೆ ಹಾಗೂ ನಾಗುರಿಯಿಂದ ಸಂಚಾರ ದಕ್ಷಿಣ ಪೊಲೀಸ್ ಠಾಣೆಯವರೆಗೆ ವ್ಹೀಲಿಂಗ್ ಸ್ಟಂಟ್ ಮಾಡುತ್ತಾ ಅಡ್ಡಾದಿಡ್ಡಿಯಾಗಿ ಇತರ ವಾಹನಗಳು, ಪಾದಚಾರಿಗಳಿಗೆ ಅಪಾಯ ಉಂಟಾಗುವ ರೀತಿಯಲ್ಲಿ ಸವಾರಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಈ ಕುರಿತಾದ ವೀಡಿಯೋವನ್ನು ಮಾ.10ರಂದು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ. ಇದು ವೈರಲ್ ಆಗಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು. ಪೊಲೀಸರು ಇಲ್ಯಾಸ್, ಬೈಕ್ ಮಾಲಕ ಮತ್ತು ವ್ಹೀಲಿಂಗ್ ಸ್ಟಂಟ್‌ನ್ನು ವೀಡಿಯೊ ಮಾಡಿದ್ದ ಸಫ್ವಾನ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತೊಂದೆಡೆ ಅಡ್ಯಾರ್ ಸಮೀಪ ಮಾ.10ರಂದು ಬೈಕ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪದ ಮೇರೆಗೆ ಕಿಶನ್ ಶೆಟ್ಟಿ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ವೀಡಿಯೋ ಕೂಡ ವೈರಲ್ ಆಗಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು.

ಉಳ್ಳಾಲದಲ್ಲಿ ತೌಸೀಫ್ ವಿರುದ್ಧ ಹಾಗೂ ವಾಮಂಜೂರಿನಲ್ಲಿ ಆನೀಝ್ ಎಂಬಾತನ ವಿರುದ್ಧ ಕೂಡ ವೀಲ್ಹಿಂಗ್ ಮಾಡಿದ್ದಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!