Thursday, June 25, 2026
Homeಕರಾವಳಿಬೆಳ್ತಂಗಡಿ : ಬೈಕ್ ಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳ:ಕಳ್ಳನನ್ನು ಅಟ್ಟಾಡಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು:...

ಬೆಳ್ತಂಗಡಿ : ಬೈಕ್ ಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳ:ಕಳ್ಳನನ್ನು ಅಟ್ಟಾಡಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು: ಅಟ್ಟಾಡಿಸಿ ಹಿಡಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

- Advertisement -
- Advertisement -

ಬೆಳ್ತಂಗಡಿ : ತಾಲೂಕಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಇಂದು ನಿಲ್ಲಿಸಿದ ಬೈಕ್ ಕದ್ದು ಪರಾರಿಯಾಗಲು ಯತ್ನಿಸಿದ ವೇಳೆ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಕಳ್ಳ ಪರಾರಿಯಾಗುವ ವೇಳೆ ಅಟ್ಟಾಡಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ನಡೆದಿದೆ. ಕಳ್ಳನನ್ನು ಅಟ್ಟಾಡಿಸಿ ಹಿಡಿಯುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಅಗಿದೆ‌.

ಬೆಳ್ತಂಗಡಿ ನಗರದ ಸಂತೆಕಟ್ಟೆ ಎಂಬಲ್ಲಿ ಲಾಯಿಲ‌ ನಿವಾಸಿಯೊಬ್ಬರು ತಮ್ಮ ಸುಜುಕಿ ಕಂಪನಿಯ ಜಿಕ್ಸರ್-150 ಬೈಕ್ ಅನಿಲ್ ವೈನ್ ಶಾಪ್ ಬಳಿ ಪಾರ್ಕ್ ಮಾಡಿ ಮೇಲ್ಭಾಗದಲ್ಲಿರುವ ರೋಯಲ್ ಕಟ್ಟಿಂಗ್ ಶಾಪ್ ಗೆ ಹೋಗಿದ್ದು ಈ ವೇಳೆ ಕಳ್ಳನೊಬ್ಬ ಬೈಕ್ ನಲ್ಲಿದ್ದ ಹೆಲ್ಮೆಟ್ ಹಾಕಿಕೊಂಡು ಬೈಕ್ ಕಿಕ್ಕ್ ಹೊಡೆದು ಹೊರಡಲು ಪ್ರಯತ್ನಿಸುತ್ತಿದ್ದರೂ ಪ್ರಯೋಜನ ಆಗದಿದ್ದಾಗ ಬೈಕ್ ದೂಡಿಕೊಂಡು ಹೋಗುತ್ತಿದ್ದ ಈ ವೇಳೆ ಪಕ್ಕದ ಅಂಗಡಿಯಲ್ಲಿದ್ದ ಲಾಯಿಲ ನಿವಾಸಿ ಗೌತಮ್ ಎಂಬಾತ ಗಮನಿಸಿ ಕಟ್ಟಿಂಗ್ ಶಾಪ್ ಗೆ ಓಡಿಹೋಗಿ ಬೈಕ್ ಮಾಲೀಕರಿಗೆ ಮಾಹಿತಿ ನೀಡಿದ್ದಾನೆ.

ತಕ್ಷಣ ಬೈಕ್ ಮಾಲೀಕ ಬೈಕ್ ಬಳಿ ಬಂದಾಗ ಬೈಕ್ ತಲ್ಲಿಕೊಂಡು ಹೋಗುತ್ತಿದ್ದ ತಕ್ಷಣ ಕಳ್ಳತನನ್ನು ಹಿಡಿದುಕೊಂಡು ವಿಚಾರಿಸಿದ್ದಾಗ ಆತನ ಅಲ್ಲಿಂದ ತಪ್ಪಿಸಿಕೊಂಡ ,ಬೈಕ್ ಮಾಲೀಕ , ಗೌತಮ್ ಲಾಯಿಲ ಮತ್ತಿತರು ಸೇರಿಕೊಂಡು ಸಂತೆಕಟ್ಟೆ ಬಸ್ ನಿಲ್ದಾಣದವರೆಗೆ ಅಟ್ಟಾಡಿಸಿಕೊಂಡು ಹೋಗಿ ನೆಲಕ್ಕೆ ಉರುಳಿಸಿ ಹಿಡಿಕೊಂಡಿದ್ದಾರೆ ಈ ವೇಳೆ ಇಪ್ಪತ್ತಕ್ಕೂ ಹೆಚ್ಚು ಸಾರ್ವಜನಿಕರು ಸಹಕರಿಸಿ ವಿಚಾರಿಸಿದ್ದಾರೆ ತನ್ನ ಹೆಸರು ವಿಳಾಸಗಳನ್ನು ಸುಳ್ಳು ಮಾಹಿತಿ ನೀಡಿದ್ದಾನೆ ಅದಲ್ಲದೆ ಯುವಕ ಆಮಲು ಪದಾರ್ಥ ಸೇವಿಸಿದ್ದ ಎನ್ನಲಾಗಿದೆ ನಂತರ ಬೆಳ್ತಂಗಡಿ ‌ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದ ಬೈಕ್ ಕಳ್ಳತನ ತಪ್ಪಿದಂತಾಗಿದೆ‌.

- Advertisement -

Latest News

error: Content is protected !!