Saturday, June 6, 2026
Homeಕರಾವಳಿಧರ್ಮಸ್ಥಳದ ಮಾಹಿತಿ ಕಚೇರಿ ಬಳಿ ಇರಿಸಿದ್ದ ಬೈಕ್ ಕಳವು

ಧರ್ಮಸ್ಥಳದ ಮಾಹಿತಿ ಕಚೇರಿ ಬಳಿ ಇರಿಸಿದ್ದ ಬೈಕ್ ಕಳವು

- Advertisement -
- Advertisement -

ಧರ್ಮಸ್ಥಳದ ಮಾಹಿತಿ ಕಚೇರಿ ಬಳಿ ಇರಿಸಿದ್ದ ಬೈಕ್ ಒಂದನ್ನು ಕಳವು ಮಾಡಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೋಡು ಸ್ಥಾನ ನಿವಾಸಿ ಅಭಿಜಿತ್‌ ಎಂಬವರು ಧರ್ಮಸ್ಥಳ ಮಾಹಿತಿ ಕಚೇರಿ ಬಳಿ ಇರಿಸಿದ್ದ ಬೈಕನ್ನು ಫೆಬ್ರವರಿ 13 ರಂದು ಕಳವು ಮಾಡಲಾಗಿದೆ ಎನ್ನಲಾಗಿದೆ. ಅಭಿಜಿತ್‌ ಅವರು ಬಾಡಿಗೆ ಆಟೋ ಚಾಲಕರಾಗಿದ್ದು, ಅಂದು ರಾತ್ರಿ ಆಟೋ ಬಾಡಿಗೆ ಮಾಡಿ ಮರುದಿನ ಫೆ.14ರಂದು ಬೆಳಗ್ಗೆ 7.30 ಗಂಟೆಗೆ ಮನೆಗೆ ಹೋಗಲು ಬೈಕ್‌ ಇಟ್ಟ ಸ್ಥಳದಲ್ಲಿ ಬಂದು ನೋಡಿದಾಗ ಬೈಕ್‌ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಕಾಣೆಯಾದ ಮೋಟಾರ್‌ ಸೈಕಲ್‌ನ ಅಂದಾಜು ಮೌಲ್ಯ 20,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

- Advertisement -

Latest News

error: Content is protected !!