Sunday, July 12, 2026
Homeಅಪರಾಧಪಾದಚಾರಿ ಮಹಿಳೆಗೆ ಬೈಕ್ ಡಿಕ್ಕಿ: ಮಹಿಳೆ ಸಾವು

ಪಾದಚಾರಿ ಮಹಿಳೆಗೆ ಬೈಕ್ ಡಿಕ್ಕಿ: ಮಹಿಳೆ ಸಾವು

- Advertisement -
- Advertisement -

ಉಳ್ಳಾಲ: ಬಬ್ಬುಕಟ್ಟೆ ಸೋಝಾ ಇಲೆಕ್ನಿಕಲ್ಸ್ ಎದುರುಗಡೆ ಪಾದಚಾರಿ ಮಹಿಳೆಗೆ ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಲ್ಲವ್ವ ಶಿವಪ್ಪ ದೊಡ್ಡಮನಿ (50) ಮೃತ ಮಹಿಳೆ. ಪತಿ ಶಿವಪ್ಪ ಅವರು ಕೂಲಿಕಾರ್ಮಿಕರಾಗಿದ್ದು, ಸಂಜೆ ನಂತರ ಬಬ್ಬು ಕಟ್ಟೆ ಬಳಿಯ ಸೋಝಾ ಇಲೆಕ್ನಿಕಲ್ಸ್ ಬಳಿಯ ಮನೆಯಲ್ಲಿ ವಾಚ್ ಮೆನ್ ವೃತ್ತಿ ನಿರ್ವಹಿಸುತ್ತಿದ್ದರು. ಎರಡು ದಿನಗಳ ಹಿಂದಷ್ಟೇ ಬಾದಾಮಿಯಿಂದ ಪತ್ನಿ ಎಲ್ಲವ್ವ ಬಂದು ಪತಿ ಜೊತೆಗೆ ತಂಗಿದ್ದರು. ಮಂಗಳವಾರದಂದು ಸಂಜೆ 8 ಗಂಟೆ ಸುಮಾರಿಗೆ ಮನೆಯ ವಿರುದ್ಧ ದಿಕ್ಕಿನಲ್ಲಿರುವ ಅಂಗಡಿಗೆ ಸಾಮಗ್ರಿ ತರಲೆಂದು ತೆರಳಿದ್ದು, ಅಲ್ಲಿಂದ ವಾಪಸ್ಸಾಗಿ ರಸ್ತೆ ದಾಟುವ ಸಂದರ್ಭ ಈ ಘಟನೆ ಸಂಭವಿಸಿದೆ.

ಮಂಗಳೂರು ದಸರಾಗೆ ತೆರಳುತ್ತಿದ್ದ ದೈಗೋಳಿ ನಿವಾಸಿ ಗಗನ್ ಎಂಬಾತನ ಬೈಕ್ ಮಹಿಳೆಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

- Advertisement -

Latest News

error: Content is protected !!