Wednesday, June 24, 2026
Homeಕರಾವಳಿಧರ್ಮಸ್ಥಳ : ಕನ್ಯಾಡಿಯಲ್ಲಿ ಕಾರು- ಬೈಕ್ ಭೀಕರ ಅಪಘಾತ; ಬೈಕ್ ಸವಾರ ಸ್ವೀಡ್ ನಿತೇಶ್ ಗಂಭೀರ

ಧರ್ಮಸ್ಥಳ : ಕನ್ಯಾಡಿಯಲ್ಲಿ ಕಾರು- ಬೈಕ್ ಭೀಕರ ಅಪಘಾತ; ಬೈಕ್ ಸವಾರ ಸ್ವೀಡ್ ನಿತೇಶ್ ಗಂಭೀರ

- Advertisement -
- Advertisement -

ಬೆಳ್ತಂಗಡಿ : ಕಾರು – ಬೈಕ್ ನಡುವೆ ಭೀಕರ ಅಪಘಾತ ನಡೆದಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು. ಅಪಘಾತದ ರಭಸಕ್ಕೆ ಬೈಕ್ ನ ಮುಂಭಾಗದ ಚಕ್ರ ಕಳಚಿ ಹೋಗಿರುವ ಘಟನೆ ಧರ್ಮಸ್ಥಳದ ಕನ್ಯಾಡಿಯಲ್ಲಿ ನಡೆದಿದೆ.

ಧರ್ಮಸ್ಥಳದಿಂದ ಉಜಿರೆ ಕಡೆ ಬರುತ್ತಿದ್ದ ಬೈಕ್ ಹಾಗೂ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಕಾರು ನಡುವೆ ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮಮಂದಿರದ ಬಳಿಯ ಕ್ರಾಸ್ ನಲ್ಲಿ ಅಪಘಾತ ನಡೆದಿದ್ದು ಬೈಕ್ ಸವಾರ ಧರ್ಮಸ್ಥಳ ನಿವಾಸಿ ನಿತೇಶ್ @ ಸ್ವೀಡ್ ನಿತೇಶ್(28) ಗಂಭೀರ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ವೇಳೆ ಕಾರಿನ ಏರ್ ಬ್ಯಾಗ್ ಓಪನ್ ಅಗಿರುವ ಕಾರಣ ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿಲ್ಲ.

ಬೈಕ್ ಸವಾರನ ಓವರ್ ಸ್ವೀಡ್ ಅಗಿ ಹೋಗುತ್ತಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಬೈಕ್ ನ ಮುಂಭಾಗದ ಚಕ್ರ ಕಳಚಿ ಹೋಗಿದ್ದು , ಕಾರಿಗೂ ಹಾನಿಯಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!