Saturday, June 27, 2026
Homeಕರಾವಳಿಉಪ್ಪಿನಂಗಡಿ: ದ್ವಿಚಕ್ರ ವಾಹನಕ್ಕೆ ಅಡ್ಡಬಂದ ಮಂಗ, ಸ್ಕೂಟರ್‌ ಸವಾರೆಗೆ ಗಂಭೀರ ಗಾಯ

ಉಪ್ಪಿನಂಗಡಿ: ದ್ವಿಚಕ್ರ ವಾಹನಕ್ಕೆ ಅಡ್ಡಬಂದ ಮಂಗ, ಸ್ಕೂಟರ್‌ ಸವಾರೆಗೆ ಗಂಭೀರ ಗಾಯ

- Advertisement -
- Advertisement -

ಉಪ್ಪಿನಂಗಡಿ: ದ್ವಿಚಕ್ರ ಸವಾರಿಯ ವೇಳೆ ಮಂಗವೊಂದು ಬೈಕ್ ಗೆ ಅಡ್ಡ ಬಂದ ಪರಿಣಾಮ ದ್ವಿಚಕ್ರ ಸವಾರೆ ಶ್ರೀಮತಿ ಪೂರ್ಣಿಮ (34) ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ಗರಡಿ ಎಂಬಲ್ಲಿ ಸಂಭವಿಸಿದೆ.

ತನ್ನ ಹೊಂಡಾ ಆಕ್ಟೀವಾ ದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಂಗವೊಂದು ರಸ್ತೆಯಲ್ಲಿ ದಿಢೀರ್‌ ಆಗಿ ಅಡ್ಡ ಬಂದಾಗ ನಿಯಂತ್ರಣ ಕಳೆದುಕೊಂಡ ಆಕ್ಟೀವಾದಿಂದ ಪೂರ್ಣಿಮರವರು ರಸ್ತೆಗೆ ಬಿದ್ದಿದ್ದರು.

ಈ ಪರಿಣಾಮ ಗಂಭೀರವಾಗಿ ಗಾಯಗೊಂಡು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಟ್ರಾಫಿಕ್‌ ಪೊಲೀಸ್‌ ಠಾಣೆಗೆ ಮಾಹಿತಿಯನ್ನು ನೀಡಲಾಗಿದೆ.

- Advertisement -

Latest News

error: Content is protected !!