Wednesday, May 15, 2024
Homeಕರಾವಳಿಉಡುಪಿಮಲ್ಪೆ: ಭೀಕರ ಬೈಕ್ ಅಪಘಾತ, ವೈದ್ಯಕೀಯ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವು !

ಮಲ್ಪೆ: ಭೀಕರ ಬೈಕ್ ಅಪಘಾತ, ವೈದ್ಯಕೀಯ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವು !

spot_img
- Advertisement -
- Advertisement -

ಮಲ್ಪೆ : ಬೈಕೊಂದು ನಿಯಂತ್ರಣ ತಪ್ಪಿ ಕಂಪೌಂಡ್ ಗೋಡೆಗೆ ಢಿಕ್ಕಿ ಹೊಡೆದು ವೈದ್ಯಕೀಯ ವಿದ್ಯಾರ್ಥಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿ ಬೀದರ್ ಜಿಲ್ಲೆಯ ಋಷಿಕೇಶ್ ( 23 ) ಮೃತಪಟ್ಟ ವಿದ್ಯಾರ್ಥಿ.

ಕುತ್ಪಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರು ಮಲ್ಪೆ ಬೀಚ್‌ಗೆ ತನ್ನ ಬೈಕಿನಲ್ಲಿ ಒಬ್ಬರೇ ಹೊರಟಿದ್ದರೆನ್ನಲಾಗಿದೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಪೌಂಡ್ ಗೋಡೆಗೆ ಢಿಕ್ಕಿ ಹೊಡೆದಿದೆ . ಇದರಿಂದ ಗಂಭೀರವಾಗಿ ಗಾಯಗೊಂಡ ಋಷಿಕೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ . ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -
spot_img

Latest News

error: Content is protected !!