Wednesday, October 14, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಉಜಿರೆ ಮಹೇಶ್ ಶೆಟ್ಟಿ ತಿಮರೋಡಿಗೆ ಮುಖಭಂಗ: ಮಂಗಳೂರು ಜಿಲ್ಲಾ ಕೋರ್ಟ್ ನಲ್ಲಿ ಮತ್ತೊಂದು...

ಬೆಳ್ತಂಗಡಿ : ಉಜಿರೆ ಮಹೇಶ್ ಶೆಟ್ಟಿ ತಿಮರೋಡಿಗೆ ಮುಖಭಂಗ: ಮಂಗಳೂರು ಜಿಲ್ಲಾ ಕೋರ್ಟ್ ನಲ್ಲಿ ಮತ್ತೊಂದು ಅರ್ಜಿ ವಜಾ

- Advertisement -
- Advertisement -

ಬೆಳ್ತಂಗಡಿ : ಪದೇ ಪದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗುತ್ತಿರುವ ಉಜಿರೆ ರೌಡಿಶೀಟರ್ ಮಹೇಶ್ ಶೆಟ್ಟಿ ತಿಮರೋಡಿಗೆ ಮಂಗಳೂರು ಜಿಲ್ಲಾ ಕೋರ್ಟ್ ನಲ್ಲಿ ಮತ್ತೊಂದು ಪ್ರಕರಣದಲ್ಲಿ ಮುಖಭಂಗವಾಗಿದೆ.

ರೌಡಿಶೀಟರ್ ಪಟ್ಟಿಯಲ್ಲಿರುವ ಉಜಿರೆ ನಿವಾಸಿ ತಿಮರೋಡಿ ಮಹೇಶ್ ಶೆಟ್ಟಿ ಮೇಲೆ ಹಲವು ಪ್ರಕರಣ ಇರುವ ಕಾರಣದಿಂದ ಬೆಳ್ತಂಗಡಿ ದಂಡಾಧಿಕಾರಿ(ತಹಶೀಲ್ದಾರ್)ಗೆ ಬೆಳ್ತಂಗಡಿ ಠಾಣಾಧಿಕಾರಿಗಳು 18-05-2025 ರಂದು ಬೆಳ್ತಂಗಡಿ ಆಡಳಿತ ಸೌಧದ ಕಚೇರಿಯಲ್ಲಿ ಭದ್ರತಾ ದೃಷ್ಟಿಯಿಂದ ಮಹೇಶ್ ಶೆಟ್ಟಿ ತಿಮರೋಡಿ ಕರೆಸಿ ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದಂತೆ 50 ಸಾವಿರ ರೂಪಾಯಿ ಮಧ್ಯಂತರ ಬಾಂಡ್ (ದಂಡಾಧಿಕಾರಿ ವಿಚಾರಣೆ ಮುಗಿಯುವವರೆಗೆ) ಮಾಡಿಸಿ ಮುಚ್ಚಳಿಕೆ ಪತ್ರ ಬರೆಸಿ ಎಚ್ಚರಿಕೆ ನೀಡಿದ್ದರು.

ಮಧ್ಯಂತರ ಬಾಂಡ್ ಬಗ್ಗೆ ಮಂಗಳೂರು ಜಿಲ್ಲಾ ಕೋರ್ಟ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರಾದ ಸಿರಾಜುದ್ದಿನ್ ಬೆಳ್ತಂಗಡಿ ದಂಡಾಧಿಕಾರಿ(ತಹಶೀಲ್ದಾರ್) ಮತ್ತು ಬೆಳ್ತಂಗಡಿ ಠಾಣಾಧಿಕಾರಿ ವಿರುದ್ಧ ನೋಟಿಸ್ ಪ್ರಶ್ನಿಸಿ 20-06-2025 ರಂದು ಕ್ರಿಮಿನಲ್ ರಿವಿಜನ್ ಪಿಟಿಷನ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ಬಗ್ಗೆ ನ್ಯಾಯಾಲಯ ವಾದ-ವಿವಾದ ನಡೆಸಿ ಅಕ್ಟೋಬರ್ 8 ರಂದು ಪ್ರಕರಣವನ್ನು ವಜಾಗೊಳಿಸಿದೆ.

- Advertisement -

Latest News

error: Content is protected !!