Friday, May 3, 2024
Homeತಾಜಾ ಸುದ್ದಿಹೊಸ ಸಿನಿಮಾ ಘೋಷಿಸಿದ ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್; ಇನ್ಮುಂದೆ ನಂದೇ ರೌಂಡು, ನಂದೇ...

ಹೊಸ ಸಿನಿಮಾ ಘೋಷಿಸಿದ ಬಿಗ್ ಬಾಸ್ ಸ್ಪರ್ಧಿ ರಕ್ಷಕ್ ಬುಲೆಟ್; ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು ಎಂದ ರಕ್ಷಕ್

spot_img
- Advertisement -
- Advertisement -

ಬೆಂಗಳೂರು: ಬುಲೆಟ್‌ ಪ್ರಕಾಶ್‌ ಮಗ ರಕ್ಷಕ್‌ ಇದೇ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ತನ್ನ ಮೊದಲ ಚಿತ್ರ ಆರಂಭಗೊಳ್ಳಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಬುಲೆಟ್‌ ಪ್ರಕಾಶ್‌ ಅವರ ಹುಟ್ಟುಹಬ್ಬದಂದು(ಏ.2 ರಂದು) ರಕ್ಷಕ್‌ ತಮ್ಮ ಮೊದಲ ಸಿನಿಮಾದ ಪೋಸ್ಟರ್‌ ನ್ನು ರಿಲೀಸ್‌ ಮಾಡಿದ್ದಾರೆ.

“ಎಲ್ಲಾ ‌ನನ್ನ‌ ಆತ್ಮೀಯರೆ , ಇಂದು‌ ನನ್ನ ಪೂಜ್ಯ ತಂದೆ ದಿವಂಗತ “ಬುಲೆಟ್ ಪ್ರಕಾಶ್” ರವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ, ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರ ತಂಡಕ್ಕೂ ಹರಸಿ ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ” ಎಂದು ರಕ್ಷಕ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮಚ್ಚು ಅಡ್ಡವಿಟ್ಟು ʼಆರ್‌ ಬಿ 01ʼ ಎಂದು ಬರೆಯಲಾಗಿದೆ. ಟೈಟಲ್‌ – ಟೀಸರ್‌ ಶೀಘ್ರದಲ್ಲೇ ರಿಲೀಸ್‌ ಆಗಲಿದೆ. ಪೋಸ್ಟರ್‌ ಕೆಳಗೆ ”ಮಚ್ಚಾ ಏರಿಯಾನಲ್ಲಿ ಕಣ್ಮುಂದೆ ಬೇಜಾನ್ ಗಾಡಿಗಳು ಸೌಂಡ್ ಮಾಡ್ತಾವೆ. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದನ್ನೇ”. ”ಬುಲೆಟ್”, ”ಇನ್ಮುಂದೆ ನಂದೆ ರೌಂಡು.. ನಂದೆ ಸೌಂಡು..” ಎನ್ನುವ ಸಾಲುಗಳನ್ನು ಬರೆಯಲಾಗಿದೆ.

ಇನ್ನು ಈ ಸಿನಿಮಾವನ್ನು ಕ್ರಿಶ್‌ ಎನ್ನುವವರು ನಿರ್ದೇಶನ ಮಾಡಲಿದ್ದು,  ಶ್ರೀಹರಿ  ಅವರ ಸಂಗೀತ ನಿರ್ದೇಶನ, ಶಿವು ಅವರ ನೃತ್ಯ ನಿರ್ದೇಶನ, ಮಹೇಶ್ ಗಂಗಾವತಿ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ‘ಶ್ರೀಧರ ಕಶ್ಯಪ್’ ಕ್ಯಾಮರಾದಲ್ಲಿ ಸಿನಿಮಾ ಸೆರೆಯಾಗಲಿದೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!