- Advertisement -
- Advertisement -
ಉಡುಪಿ: ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಮೀನುಗಾರಿಕೆ ಸರ್ಕಾರದ ಸೂಚನೆ ಹಿನ್ನಲೆಯಲ್ಲಿ ಮತ್ತೆ ಆರಂಭವಾಗಲಿದೆ. ಏಪ್ರಿಲ್ 15 ರಂದು ಬೆಳಗ್ಗೆಯಿಂದ ಮೀನುಗಾರಿಕೆ ಆರಂಭವಾಗಲಿದೆ.
ಮೀನುಗಾರಿಕಾ ಒಕ್ಕೂಟದ ಅಧ್ಯಕ್ಷ ಯಶಪಾಲ ಸುವರ್ಣ ಈ ಕುರಿತು ಮಾಹಿತಿ ನೀಡಿದ್ದು, ಸರ್ಕಾರದ ಸೂಚನೆಯಂತೆ ಮೀನುಗಾರಿಕೆ ಆರಂಭಿಸಲಾಗುವುದು. ನಾಡದೋಣಿಗಳಲ್ಲಿ ಐವರಿಗೆ ಮೀನು ಹಿಡಿಯಲು ಅವಕಾಶವಿದ್ದು, ಮೀನು ಮಾರಾಟಕ್ಕೆ ಕೆಲವು ಮಾರುಕಟ್ಟೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮೀನುಗಾರಿಕೆ ಸ್ಥಗಿತಗೊಂಡಿದ್ದರಿಂದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ದೂರದ ಊರಿನಲ್ಲಿರುವ ಕಾರ್ಮಿಕರು ಸದ್ಯಕ್ಕೆ ಬರುವ ಸಾಧ್ಯತೆ ಇಲ್ಲವಾಗಿದ್ದು, ಸ್ಥಳೀಯ ಮೀನುಗಾರರನ್ನು ಬಳಸಿಕೊಂಡು ಮೀನುಗಾರಿಕೆ ಆರಂಭಿಸಲಾಗುವುದು ಎಂದು ಹೇಳಲಾಗಿದೆ.
- Advertisement -