Friday, April 26, 2024
Homeತಾಜಾ ಸುದ್ದಿ'ಬಿಗ್ ಬಾಸ್-8' ಆರಂಭಕ್ಕೆ ದಿನಾಂಕ ಫಿಕ್ಸ್ ಮಾಡಿದ ಕಿಚ್ಚ ಜೋಯಿಸರು, ಇಲ್ಲಿದೆ ಮಾಹಿತಿ..

‘ಬಿಗ್ ಬಾಸ್-8’ ಆರಂಭಕ್ಕೆ ದಿನಾಂಕ ಫಿಕ್ಸ್ ಮಾಡಿದ ಕಿಚ್ಚ ಜೋಯಿಸರು, ಇಲ್ಲಿದೆ ಮಾಹಿತಿ..

spot_img
- Advertisement -
- Advertisement -

ಬೆಂಗಳೂರು: ಕನ್ನಡ ಬಿಗ್​ ಬಾಸ್​ ಯಾವಾಗ ಆರಂಭವಾಗಲಿದೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕಿಚ್ಚ ಜೋಯಿಸರು ಕನ್ನಡ ಬಿಗ್​ ಬಾಸ್​ 8ನೇ ಸೀಸನ್​ ಆರಂಭಿಸುವುದಕ್ಕೆ ಮುಹೂರ್ತ ನೀಡಿದ್ದಾರೆ. ಇದೇ ಫೆಬ್ರವರಿ 28ರಿಂದ ಬಿಗ್​ ಬಾಸ್ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ.

ನಟ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಯಶಸ್ವಿಯಾಗಿ ಮೂಡಿ ಬರಲಿರುವ ಬಿಗ್ ಬಾಸ್ 8ನೇ ಸೀಸನ್ ಇದೇ ಫೆ. 28 ರಿಂದ ಪ್ರತಿದಿನ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇಂದು ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಟ್ವಿಟರ್ ನಲ್ಲಿ ಪ್ರೋಮೊ ರಿಲೀಸ್ ಮಾಡಿದೆ.

ಇನ್ನು ಈ ಬಾರಿ ಬಿಗ್ ಮನೆಗೆ ಕಾಲಿಡಲಿರುವ ಸ್ಪರ್ಧಿಗಳು ಯಾರು ಎಂಬುದು ಇದುವರೆಗೆ ರಿವೀಲ್ ಆಗಿಲ್ಲ. ಫೆ. 28 ರಂದೇ ಸ್ಪರ್ಧಿಗಳ ಹೆಸರು ಬಹಿರಂಗವಾಗಲಿದೆ. ಬುಧ, ಗುರು. ಶುಕ್ರ , ಹಾಗೂ ಶನಿ ಒಂದೇ ಕೋಣೆಯಲ್ಲಿದೆ. ಉತ್ತಮ ಕಾಲ ಕೂಡಿ ಬಂದಿದ್ದು , ಶುಭ ಮಹೂರ್ತದಲ್ಲಿ ಬಿಗ್ ಬಾಸ್ ಸುಸೂತ್ರವಾಗಲಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇನ್ನೂ, ಸುದೀಪ್ ಜ್ಯೋತಿಷಿ ಗೆಟಪ್ ನಲ್ಲಿ ಕಾಣಿಸಿಕೊಂಡು ಬಿಗ್ ಬಾಸ್ ದಿನಾಂಕ ಘೋಷಿಸಿದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.

- Advertisement -
spot_img

Latest News

error: Content is protected !!