Tuesday, April 16, 2024
Homeತಾಜಾ ಸುದ್ದಿಬಿಗ್ ಬಾಸ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ : ದಿವ್ಯಾ ಉರುಡುಗ ಆಸ್ಪತ್ರೆಗೆ ದಾಖಲು

ಬಿಗ್ ಬಾಸ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ : ದಿವ್ಯಾ ಉರುಡುಗ ಆಸ್ಪತ್ರೆಗೆ ದಾಖಲು

spot_img
- Advertisement -
- Advertisement -

ಬೆಂಗಳೂರು: ಬಿಗ್ ಬಾಸ್ ಸೀಸನ್ 8 ಮುಗಿಯೋದಕ್ಕೆ ಇನ್ನು ಕೇವಲ ನಾಲ್ಕು ವಾರಗಳು ಮಾತ್ರ ಬಾಕಿ ಉಳಿದಿವೆ. ಯಾರು ಬಿಗ್ ಬಾಸ್ ಮನೆಯಲ್ಲಿ  ಉಳಿಯುತ್ತಾರೆ. ಯಾರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗ್ತಾರೆ ಅನ್ನೋ ಲೆಕ್ಕಾಚಾರಗಳು ಜೋರಾಗಿವೆ. ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಂತೂ ಯಾರು ಇರ್ತಾರೆ ಯಾರು ಹೋಗ್ತಾರೆ ಅನ್ನೋದನ್ನು ಹೇಳೋದಕ್ಕೆ ಸಾಧ್ಯಾನೇ ಇಲ್ಲ ಎಂಬಂತಾಗಿದೆ.

ಹೀಗಿರುವಾಗಲೇ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿವ್ಯಾ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಡಲ್ ಆಗಿದ್ದರು. ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ಅದರಲ್ಲೂ ಕಳೆದ ಎರಡು ಮೂರು ದಿನಗಳಿಂದ ದಿವ್ಯಾ ಸಿಕ್ಕಾಪಟ್ಟೆ ಡಲ್ ಆಗಿದ್ರು. ತಮ್ಮ ಪಾಡಿಗೆ ತಾವಿದ್ರು. ನೋಡಿದ್ರೇನೇ ಏನೋ ಆಗಿದೆ ಎಂಬುವುದು ಗೊತ್ತಾಗ್ತಿತ್ತು.ಆದ್ರೀಗ ನಿಜ ವಿಚಾರ ಗೊತ್ತಾಗಿದೆ ದಿವ್ಯಾ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ  ದಾಖಲಿಸಲಾಗಿದೆ ಅನ್ನೋ ಮಾಹಿತಿ ತಿಳಿದು ಬಂದಿದೆ.

ಕಳೆದ ಕೆಲವು ದಿನಗಳಿಂದ ದಿವ್ಯಾ ಯೂರಿನ್ ಇನ್ಫೆಕ್ಷನ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಮೆಡಿಸನ್ ತೆಗೆದುಕೊಂಡ್ರೂ ಅವರಿಗೆ ಸಮಸ್ಯೆ ಕಡಿಮೆ ಯಾಗಿರಲಿಲ್ಲ. ಆರೋಗ್ಯ ಸುಧಾರಿಸಿರಲಿಲ್ಲ. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಬಿಗ್ ಬಾಸ್ ಮನೆಗೆ ದಿವ್ಯಾ ವಾಪಾಸ್ ಬರ್ತಾರಾ ಅನ್ನೋದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಯಾಕಂದ್ರೆ ದಿವ್ಯಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತೊಂದು  ಕಡೆ ಕೊರೊನಾ ಆರ್ಭಟ ಹೊರಗಡೆ ಯಾವ ರೀತಿ ಇದೆ ಅನ್ನೋದನ್ನು ನಾವು ನೋಡುತ್ತಿದ್ದೇವೆ. ಒಮ್ಮೆ ಹೊರಗಡೆ ಬಂದು ಮತ್ತೆ ದೊಡ್ಮನೆಗೆ ವಾಪಾಸ್  ಹೋಗೋದು ಕೊಂಚ ರಿಸ್ಕ್ ಹಾಗಾಗಿ ದಿವ್ಯಾ ಮತ್ತೆ ಹೋಗ್ತಾರಾ ಅನ್ನೋದನ್ನು ಕಾದು ನೋಡ್ಬೇಕು.

- Advertisement -
spot_img

Latest News

error: Content is protected !!