Sunday, May 5, 2024
Homeತಾಜಾ ಸುದ್ದಿವಿಡಿಯೋ: ವಿಮಾನ ಹತ್ತುವಾಗ ಮೂರು ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ ಬೈಡನ್

ವಿಡಿಯೋ: ವಿಮಾನ ಹತ್ತುವಾಗ ಮೂರು ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ ಬೈಡನ್

spot_img
- Advertisement -
- Advertisement -

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು ವಿಮಾನ ಹತ್ತುವ ವೇಳೆ ಮೆಟ್ಟಿಲುಗಳಿಂದ ಮೂರು ಬಾರಿ ಜಾರಿ ಬಿದ್ದಿರುವ ಘಟನೆ ಶುಕ್ರವಾರ ಆಂಡ್ರೋ ಏರ್​ಬೇಸ್​ನಲ್ಲಿ ನಡೆದಿದೆ.

ಅಮೇರಿಕ ಅಧ್ಯಕ್ಷ ಜೋ ಬಿಡನ್ ಅವರು ಅಟ್ಲಾಂಟಾಗೆ ಭೇಟಿ ನೀಡುತ್ತಿದ್ದರು, ಅಲ್ಲಿ ಅವರು ಏಷ್ಯನ್-ಅಮೇರಿಕನ್ ಸಮುದಾಯದ ಮುಖಂಡರನ್ನು ಭೇಟಿಯಾಗಬೇಕಿತ್ತು. ‘ದಿ ಸನ್’ ವರದಿಯ ಪ್ರಕಾರ, ಅವರು ಅಟ್ಲಾಂಟಾಗೆ ತೆರಳಲು ಏರ್ ಫೋರ್ಸ್ ಒನ್ ವಿಮಾನ ಹತ್ತಲು ಮೆಟ್ಟಿಲುಗಳನ್ನು ಏರಲು ಮುಂದಾದಾಗ ಬ್ಯಾಲೆನ್ಸ್ ತಪ್ಪಿ ಅವರು ಮೆಟ್ಟಿಲುಗಳ ಮೇಲೆ ಎಡವಿದರು. ಈ ಘಟನೆ ಬಿಡೆನ್‌ಗೆ ಒಮ್ಮೆ ಅಲ್ಲ ಮೂರು ಬಾರಿ ಸಂಭವಿಸಿದೆ. ಆದರೂ ಸಾವರಿಸಿಕೊಂಡು ವಿಮಾನವನ್ನ ಹತ್ತಿದ್ದ ಬಳಿಕ ಏನೂ ಆಗಿಲ್ಲವೆನ್ನುವಂತೆ ಸೆಲ್ಯೂಟ್​ ಮಾಡಿ ವಿಮಾನದ ಒಳಕ್ಕೆ ಹೋಗಿದ್ದಾರೆ. ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜಿನ್ ಪಿಯರೇ ಜೋ ಬಿಡೆನ್​ ಕ್ಷೇಮವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

78 ವರ್ಷದ ಜೋ ಬೈಡನ್ ಅವರು ಎಡವಿ ಬಿದ್ದರೂ ತಮ್ಮ ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡದಿರುವುದು ಅಚ್ಚರಿ ಮೂಡಿಸಿತು. ಮೆಟ್ಟಿಲನ್ನ ಹತ್ತುತ್ತಿದ್ದ ವೇಳೆಯ ಜೋರಾಗಿ ಗಾಳಿ ಬೀಸುತ್ತಿತ್ತು. ಹೀಗಾಗಿ 78 ವರ್ಷದ ಜೋ ಬಿಡೆನ್​ ಆಯತಪ್ಪಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಈವರೆಗೆ ಹಲವು ಮಂದಿ ನೋಡಿದ್ದು ರಾಷ್ಟ್ರಪತಿಗಳ ಆರೋಗ್ಯದ ಬಗ್ಗೆ ಜನರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಅವರು ವಿರೋಧಿಗಳು ಈ ಘಟನೆಯನ್ನು ಅವರನ್ನು ಟೀಕಿಸಲು ಬಳಸಿಕೊಂಡಿದ್ದಾರೆ. ಅಧ್ಯಕ್ಷರಿಗೆ ವಯಸ್ಸಾಗಿದೆ, ನಡೆಯುವುದೂ ಕಷ್ಟ ಎಂದು ಗೇಲಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!