Friday, May 17, 2024
Homeತಾಜಾ ಸುದ್ದಿಕಲಾವಿದ ಸೂರಿ ಮಾರ್ನಾಡ್ ಸಾಹಿತ್ಯದ ಹಸಿರು ಬೆಟ್ಟದ ಒಡೆಯ ಭಕ್ತಿಗೀತೆ ಲೋಕಾರ್ಪಣೆ: ಅಯ್ಯಪ್ಪ ಸ್ವಾಮಿಯ ಸ್ಮರಣೆಯಲ್ಲಿದೆ...

ಕಲಾವಿದ ಸೂರಿ ಮಾರ್ನಾಡ್ ಸಾಹಿತ್ಯದ ಹಸಿರು ಬೆಟ್ಟದ ಒಡೆಯ ಭಕ್ತಿಗೀತೆ ಲೋಕಾರ್ಪಣೆ: ಅಯ್ಯಪ್ಪ ಸ್ವಾಮಿಯ ಸ್ಮರಣೆಯಲ್ಲಿದೆ ದಿವ್ಯಶಕ್ತಿ: ರಮೇಶ್ ಗುರುಸ್ವಾಮಿ

spot_img
- Advertisement -
- Advertisement -

ಮುಂಬೈ  ಫೆ 24. ನಗರದ ಹೃದಯ ಭಾಗವಾಗಿರುವ ವರ್ಲಿಯಲ್ಲಿ  ಮಧುಸೂದನ್ ಮಿಲ್ ಕಾಂಪೌಂಡಿನಲ್ಲಿ ಇರುವ  ಅಪ್ಪಾಜಿ ಬೀಡು ಫೌಂಡೇಶನ್‌[ರಿ] ಮತ್ತು ಐ ಲೇಸಾ ದಿ ವಾಯ್ಸ್‌ ಆಫ್‌ ಓಷನ್‌ [ರಿ] ಸಂಸ್ಥೆಯು ಜಂಟಿಯಾಗಿ ಕಲಾವಿದ ಸೂರಿ ಮಾರ್ನಾಡ್‌ ಸಾಹಿತ್ಯದ ಹಸಿರು ಬೆಟ್ಟದ ಒಡೆಯ ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಲಾಯ್ತು.

ಮುಖ್ಯ ಅತಿಥಿಯಾಗಿ ಟೀಂ ಐಲೇಸಾದ ಕವಿ ಸಾಹಿತಿ ಶಾಂತರಾಮ ಶೆಟ್ಟಿಯವರು ಮಾತನಾಡುತ್ತಾ ಕರೋನ ಸಂದರ್ಭದಲ್ಲಿ ಕವಿತೆ ಒಂದನ್ನು ಬರೆದಿದ್ದೆ ಅದನ್ನು ಕಂಡು ನನ್ನ ಆತ್ಮೀಯರಾಗಿದ್ದ ಕೆಲವರು ಅದಕ್ಕೊಂದು ಗಟ್ಟಿತನದ ಶಕ್ತಿ ನೀಡಿದರು, ವಿದೇಶದ ಗೆಳೆಯರು ಕೂಡ ಅದಕ್ಕೆ ಸಹಕಾರ ನೀಡಿದ್ರು. ಆ ಶಕ್ತಿಯೇ  ಐ ಲೇಸಾ ತಂಡ ವಾಗಿ ಬೆಳೆದು ಬಂತು. ಸೂರಿ ಮಾರ್ನಾಡ್ ಓರ್ವ ಅದ್ಭುತ ಕಲಾವಿದ ಅಯ್ಯಪ್ಪ ಸ್ವಾಮಿ ಭಕ್ತರಾಗಿರುವ ಅವರು ಭಕ್ತಿಯ ಅನುಭವಗಳನ್ನು ಸಾಹಿತ್ಯದಲ್ಲಿ ಹಂಚಿಕೊಂಡಿದ್ದಾರೆ. ಭಕ್ತಿಗೀತೆ ಜನಸಾಮಾನ್ಯರಿಗೆ ತಲುಪುವ ಕೆಲಸ ನಮ್ಮೆಲ್ಲರಿಗೂ ಆಗಿದೆ ಅದು ಅವರಿಗೆ ನೀಡುವ ಕೊಡುಗೆಯಾಗಿದೆ ಎಂದು ನುಡಿದರು.

 ಅಂದೇರಿ ಅಯ್ಯಪ್ಪ ಭಕ್ತಬಂಧದ ಸಂಸ್ಥಾಪಕ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಆಶೀರ್ವಚನ ಮಾತುಗಳನ್ನು ನೀಡಿ ಕಲಿಯುಗದಲ್ಲಿ ಸಾಕ್ಷಾತ್ಕರಿಸುವ ದೇವರೆಂದರೆ ಅದು ಅಯ್ಯಪ್ಪ ಸ್ವಾಮಿ ಮಾತ್ರ ,ಆತನನ್ನು ಶ್ರದ್ದೆಯಿಂದ ಸ್ಮರಿಸಿದರೆ ಮಾತ್ರ ನಮ್ಮನ್ನು ಹಾರೈಸುತ್ತಾರೆ. ಇಂದು ಲೋಕಾರ್ಪಣೆಗೊಂಡ ಈ ಭಕ್ತಿ ಗೀತೆಯನ್ನು ಕೇಳುವ ಮೂಲಕ ಇನ್ನಷ್ಟು ಜನ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲಿ ಎಂದು ನುಡಿದರು.

ಭಕ್ತಿ ಗೀತೆಯನ್ನು ಬಿಡುಗಡೆಗೊಳಿಸಿದ ಅಪ್ಪಾಜಿ ಬೇಡಿನ ಸಂಸ್ಥಾಪಕ ರಮೇಶ್ ಗುರುಸ್ವಾಮಿ  ಆಶೀರ್ವಚನ ನೀಡುತ್ತಾ ಟೀಂ ಐಲೇಸಾದ ತಂಡದವರು ಈ ಭಕ್ತಿ ಗೀತೆಯನ್ನು ವಿದೇಶದಲ್ಲೂ ಕೂಡ ಲೋಕರ್ಪಣೆಗಳಿಸುವಷ್ಟು ಸಾಮರ್ಥ್ಯ ಇತ್ತು. ಆದರೆ ಅಪ್ಪಾಜಿ ಬೀಡಿನ ಪುಣ್ಯ ಭೂಮಿಯಲ್ಲಿ ಲೋಕರ್ಪಣೆ ಯಾಗಬೇಕು ಎನ್ನುವ ಅವರೆಲ್ಲರ ಭಕ್ತಿಗೆ ಕಲಿಯುಗ ವರದ ಸದಾ ಎಲ್ಲರನ್ನು ಅನುಗ್ರಹಿಸುತ್ತಾನೆ, ಈ ಭಕ್ತಿಗೀತೆಯಲ್ಲಿದೆ ಅಯ್ಯಪ್ಪ ಚಿಂತನೆ,ಸೂರಿ ಮಾರ್ನಾಡ್‌ ಸಹೋದರರು ಎಲ್ಲಾ ಕ್ಷೇತ್ರದಲ್ಲೂ ಪರಿಣಿತರು. ನಮ್ಮೀ ಕ್ಷೇತ್ರದ ಮೇಲೆ ಇಟ್ಟಿರುವ ಭಕ್ತಿಗೆ ಈ ಕಾರ್ಯಕ್ರಮ ಕೊಡುಗೆಯಾಗಿದೆ. ಭಕ್ತಿ ಗೀತೆ ಲೋಕ ಪ್ರಸಿದ್ಧಿಯಾಗಲಿ ಅಯ್ಯಪ್ಪ ಸ್ವಾಮಿಯ ಸ್ಮರಣೆಯಲ್ಲಿದೆ ದಿವ್ಯ ಶಕ್ತಿ ಎಂದು ನುಡಿದರು.

ಗೌರವ ಅತಿಥಿಗಳಾಗಿ ಗೋಪಾಲ್‌ ಪಟ್ಟೆ ಮತ್ತು ಯು ಕೆಯ ವಿವೇಕಾನಂದ ಮಂಡೆಕರ ಅವರ ಉಪಸ್ಥಿತಿಯ ಜೊತೆ ಮುಂಬೈಯ ಶ್ರೇಷ್ಠ ಗುರುಸ್ವಾಮಿಗಳಾದ ರಮೇಶ್‌ ಗುರುಸ್ವಾಮಿ, ಶಾಂಭವಿ ಗುರುಸ್ವಾಮಿ ,ರಾಜಮಣಿ ಸ್ವಾಮಿ, ಚಂದ್ರಹಾಸ ಸ್ವಾಮಿ ಮತ್ತು  ರೇರೋಡಿನ ಶ್ರೀ ಅಯ್ಯಪ್ಪ ಭಕ್ತ ವೃಂದದ ಸಂಸ್ಥಾಪಕ ಸತೀಶ್‌ ಗುರು ಸ್ವಾಮಿಯವರು ಮತ್ತು ಅಪ್ಪಾಜೀ ಬೀಡಿನ ಟ್ರಸ್ಟಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಕವಿತಾ ಶೆಟ್ಟಿ ಇವರೆಲ್ಲರು ಸೇರಿ ದೀಪ ಬೆಳಗಿಸಿ . ಭಕ್ತಿ ಗೀತೆ ಲೋಕಾರ್ಪಣೆ ಮಾಡಿ, ಆಶೀರ್ವಾದ ಮಾಡಿದರು.    ಕಾರ್ಯಕ್ರಮದಲ್ಲಿ   ಪಾಲ್ಗೊಂಡಿದ್ದ ಸ್ವಾಮೀಜಿಯವರಿಗೆ ಗುರುಕಾಣಿಕೆ ನೀಡಿ ಸೂರಿ ಮರ್ನಾಡು ದಂಪತಿ  ಗೌರವಿಸಿದರು. ಹಾಗೂ ಭಕ್ತಿಗೀತೆ ಹಾಡಿದವರಿಗೆ ಮತ್ತು ತಾಂತ್ರಿಕ ವರ್ಗದವರಿಗೆ ಫಲಕ ನೀಡಿ ಗೌರವಿಸಲಾಯ್ತು.

ಶಕುಂತಲಾ ಶೆಟ್ಟಿಯವರು ಹಸಿರುಬೆಟ್ಟದ ಸಾಹಿತ್ಯ , ಸಂಗೀತ , ಹಾಡುಗಾರರ ಬಗ್ಗೆ ಸುವಿಸ್ತಾರವಾಗಿ  ತಮ್ಮ ಮಾತುಗಳನ್ನು ಪ್ರಸ್ತುತಪಡಿಸಿದರು. ಭಕ್ತಿ ಗೀತೆಯ ಸಾಹಿತ್ಯ ಬರೆದ ಸೂರಿ ಮತ್ತು ಅವರ ಪರಿವಾರವನ್ನು ಸನ್ಮಾನಿಸಲಾಯ್ತು . ಈ ಕಾರ್ಯಕ್ರಮಕ್ಕೆ ಕಾರಣಿಭೂತರಾದ ಅಪ್ಪಾಜಿ ಬಿಡು ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ ಸುರೇಶ್‌ ಶೆಟ್ಟಿ  ಕೇದಗೆ ಅವರನ್ನು ಗೌರವಿಸಲಾಯ್ತು. ಭಕ್ತಿ ಗೀತೆ ಲೋಕಾರ್ಪಣೆ ಆದ ಬಳಿಕ ರಮೇಶ್‌ ಗುರುಸ್ವಾಮಿಯ ಅವಳಿ ಮಕ್ಕಳ ರಾಣಿ ಮತ್ತು ರಾಗಿಣಿ ಹಾಡಿದ ಅಪ್ಪಾಜಿ ಬೀಡಿನ ಹಾಡನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.

ಅಪ್ಪಾಜಿ ಬೀಡಿನ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಭಕ್ತರೆಲ್ಲರೂ ಮುಂದಿನ ದಿನಗಳಲ್ಲೂ ಕೂಡ ಕ್ಷೇತ್ರದಲ್ಲಿ ನಡೆಯುವ ಸೇವಾಕಾರಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿ ಧನ್ಯವಾದ ನೀಡಿದರು.

ರಘುನಾಥ್‌ ಶೆಟ್ಟಿ ಕಾಂದಿವಲಿ ಇವರು ಪೂರ್ತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಪ್ಪಾಜೀ ಬೀಡುವಿನ ಮಹಿಳಾ ವಿಭಾಗದವರು ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು

ಅಪ್ಪಾಜಿ ಬೀಡಿನ ಎಲ್ಲಾ ಕಾರ್ಯಕರ್ತರು ಕಾರ್ಯಕಾರಿ ಸಮಿತಿಯ ಸದಸ್ಯರು  ,ಕರ್ನಾಟಕ ಸಂಘದ ಭರತ್‌ಕುಮಾರ್‌ ಪೊಲಿಪು , ಓಂದಾಸ್‌ ಕಣ್ಣಂಗಾರ್‌, ಕವಿ ವಿಶ್ವನಾಥ್‌ ಪೇತ್ರಿ , ರಂಗನಟರಾದ ಮೋಹನ್‌ ಮಾರ್ನಾಡ್‌, ಅಹಲ್ಯ ಬಲ್ಲಾಳ್‌, ಮನೋಹರ ನಂದಳಿಕೆ, ಅವಿನಾಶ್‌ ಕಾಮತ್‌ ಮತ್ತು ರಮೇಶ್‌ ಶಿವಪುರ್‌ ,ನಮನ ಫ್ರೆಂಡ್ಸ್‌ನ ಪ್ರಭಾಕರ್‌ ದಿವಾಕರ್‌, ಬಂಟರಸಂಘ ಸಿಟಿ ರೀಜನ್‌ನ ಅಧ್ಯಕ್ಷರಾದ ಶಿವರಾಮ್‌ ಶೆಟ್ಟಿ, ಆಶೋಕ್‌ ಪಕ್ಕಳ , ವಿಶ್ವನಾಥ್‌ ಶೆಟ್ಟಿ , ಸುಚಿತ್ರಾ ಶೆಟ್ಟಿ  ಐಲೇಸಾದ ಹಾಡುಗಾರರಾದ ಡಾ ಪಲ್ಲವಿ , ರಾಶಿ, ರಮೇಶ್‌ ನಾರಯಣ, ವಿಜಯರಾಘವನ್‌ ,ಸುವಿದ್‌ ಸೂರಿ ಮಾರ್ನಾಡ್‌ ಇನ್ನಿತರರು ಭಾಗಿಯಾಗಿದ್ದರು. ಅಪ್ಪಾಜೀ ಬೀಡಿನ ಸದಸ್ಯರು ಸಹಕಾರ ನೀಡಿದರು. ಅಪ್ಪಾಜೀ ಬೀಡಿನ ಅಧ್ಯಕ್ಷರನ್ನು ಸದಸ್ಯರನ್ನು ಐಲೇಸಾದ ಪರವಾಗಿ ಗೌರವಿಸಲಾಯ್ತು. ಬಳಿಕ ಶಿವರಾತ್ರಿಯ ಅಂಗವಾಗಿ ಭಜನೆ    ಮುಂಜಾನೆಯವರೆಗೆ ನಡೆಯಿತು.

ಚಿತ್ರ ವರದಿ: ದಿನೇಶ್ ಕುಲಾಲ್

- Advertisement -
spot_img

Latest News

error: Content is protected !!