Saturday, June 6, 2026
Homeತಾಜಾ ಸುದ್ದಿಕೊರೋನಾ ಭೀತಿಯ ನಡುವೆಯೂ ಹೈಟೆಕ್ ವೇಶ್ಯವಾಟಿಕೆ: ಸಿಸಿಬಿ ದಾಳಿ, 27 ಯುವತಿಯರ ರಕ್ಷಣೆ

ಕೊರೋನಾ ಭೀತಿಯ ನಡುವೆಯೂ ಹೈಟೆಕ್ ವೇಶ್ಯವಾಟಿಕೆ: ಸಿಸಿಬಿ ದಾಳಿ, 27 ಯುವತಿಯರ ರಕ್ಷಣೆ

- Advertisement -
- Advertisement -

ಬೆಂಗಳೂರು: ಕೊರೋನಾ ಮಹಾಮಾರಿ ರಾಜ್ಯ ರಾಜಧಾನಿಯಲ್ಲಿ ತಂಡವವಾಡುತ್ತಿದ್ದರೂ ಮಾಂಸದ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ಇಂದು ಬೆಂಗಳೂರು ಸಿಸಿಬಿ ಮಹಿಳಾ ತಂಡ ಸರಿಯಾದ ಮಾಹಿತಿಯ ಮೇರೆಗೆ ವೇಶ್ಯವಾಟಿಕೆ ಅಡ್ಡದ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನೇಪಾಳ ಮೂಲದ 9, ಪಂಜಾಬ್ ಮೂಲದ 9 ಯುವತಿಯರು, ದೆಹಲಿ ಮೂಲದ ನಾಲ್ವರು, ಜಾರ್ಖಂಡ್ ಮೂಲದ ಒಬ್ಬ ಯುವತಿ ಹಾಗೂ ಮಹಾರಾಷ್ಟ್ರ ಮೂಲದ ಇಬ್ಬರು ಹಾಗೂ ಪಶ್ಚಿಮ ಬಂಗಾಳದ ಮತ್ತು ಉತ್ತರ ಪ್ರದೇಶದ ಯುವತಿಯರು ಸೇರಿ ಒಟ್ಟು 27 ಯುವತಿಯರ ರಕ್ಷಣೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಪ್ರಕರಣ ಸಂಬಂಧ ರಾಜಸ್ಥಾನ ಮೂಲದ ಯೋಗೇಶ್ ಹಾಗೂ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿಗಳು ಮೊಬೈಲ್‍ಗಳ ಮೂಲಕ ಪೋಟೋಗಳನ್ನು ರವಾನಿಸುತ್ತಿದ್ದರಲ್ಲದೆ ಹಣವನ್ನೂ ಸಹ ಪಾವತಿಸಿಕೊಳ್ಳುತ್ತಿದ್ದುದು ವಿಚಾರಣೆ ಯಿಂದ ತಿಳಿದು ಬಂದಿದೆ.

- Advertisement -

Latest News

error: Content is protected !!