Sunday, May 5, 2024
Homeತಾಜಾ ಸುದ್ದಿಬೆಂಗಳೂರಿಗೆ ಪ್ರಯಾಣಿಸುವವರ ಗಮನಕ್ಕೆ: ಹೆದ್ದಾರಿ ಟೋಲ್ ಶುಲ್ಕ ಏರಿಕೆ

ಬೆಂಗಳೂರಿಗೆ ಪ್ರಯಾಣಿಸುವವರ ಗಮನಕ್ಕೆ: ಹೆದ್ದಾರಿ ಟೋಲ್ ಶುಲ್ಕ ಏರಿಕೆ

spot_img
- Advertisement -
- Advertisement -

ಬೆಂಗಳೂರು: ಬೆಂಗಳೂರು- ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‌ಎಚ್‌-75) ಪ್ರಯಾಣವು ಸೆ.1ರಿಂದ ದುಬಾರಿಯಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಹೆದ್ದಾರಿ ಶುಲ್ಕವನ್ನು ಪರಿಷ್ಕರಿಸಿದ್ದು, ಇದರಿಂದ ನಿತ್ಯ ಪ್ರಯಾಣಿಕರ ಮೇಲೆ ಹೊರೆ ಹೆಚ್ಚಲಿದೆ.

ಈ ಮಾರ್ಗದಲ್ಲಿ ಸಿಗುವ ನೆಲಮಂಗಲ, ದೇವಿಹಳ್ಳಿ ಹಾಗೂ ಕರ್ಬೈಲು (ಬೆಳ್ಳೂರು ಕ್ರಾಸ್‌) ಟೋಲ್‌ ಪ್ಲಾಜಾಗಳಲ್ಲಿ ಒಂದೇ ಕೇಂದ್ರದ ಮೂಲಕ ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಯಾಣಿಸುವವರು ಹಾಗೂ ನಿತ್ಯಪ್ರಯಾಣದ ಪಾಸ್‌ ಪಡೆದು ಪ್ರಯಾಣಿಸುವವರಿಗೆ ಶುಲ್ಕ ಪರಿಷ್ಕರಣೆ ದುಬಾರಿಯಾಗಲಿದೆ.

ಒಮ್ಮೆ ಮಾತ್ರ ಟೋಲ್‌ ಸಂಗ್ರಹ ಕೇಂದ್ರದ ಮೂಲಕ ಹಾದುಹೋಗುವ ಕಾರುಗಳಿಗೆ ಶುಲ್ಕ ಹೆಚ್ಚಳ ಮಾಡಿಲ್ಲ. ಟೋಲ್‌ ಮೂಲಕ ಸಾಗಿ ಮತ್ತೆ ಹಿಂದಕ್ಕೆ ಬರುವ ಕಾರುಗಳು ₹ 70 ಅಂದರೆ ₹ 5 ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ. ತಿಂಗಳ ಪಾಸ್‌ಗೆ ₹ 20 ಹೆಚ್ಚುವರಿ ಮೊತ್ತ (ಒಟ್ಟು ₹ 1370) ಪಾವತಿಸಬೇಕಾಗುತ್ತದೆ.

ಲಘು ವಾಹನಗಳು ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಹಾದುಹೋದರೂ ಅವುಗಳ ಶುಲ್ಕದಲ್ಲಿ ಹೆಚ್ಚೇನೂ ವ್ಯತ್ಯಾಸವಾಗದು. ಲಘು ವಾಹನಗಳ ಮಾಲೀಕರು ತಿಂಗಳ ಪಾಸ್‌ಗೆ ₹ 40 ಹೆಚ್ಚು ಪಾವತಿಸಬೇಕಾಗುತ್ತದೆ.

ಬಸ್‌ಗಳು ಮತ್ತು ಟ್ರಕ್‌ಗಳು ಒಮ್ಮೆ ಹಾದು ಹೋಗುವ ಶುಲ್ಕದಲ್ಲಿ ₹ 5 (ಒಟ್ಟು ₹ 160) ಹೆಚ್ಚಳ ಮಾಡಲಾಗಿದೆ. ದಿನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹಾದು ಹೋಗುವುದಕ್ಕೆ ₹ 240 ಶುಲ್ಕ ನಿಗದಿಪಡಿಸಲಾಗಿದೆ. ಈ ವಾಹನಗಳ ತಿಂಗಳ ಪಾಸ್‌ ದರವನ್ನು ₹ 4,725ರಿಂದ ₹ 4,800ಕ್ಕೆ ಹೆಚ್ಚಿಸಲಾಗಿದೆ. ಸಾವಿರಾರು ವಾಹನಗಳನ್ನು ಹೊಂದಿರುವ ಕೆಎಸ್‌ಆರ್‌ಟಿಸಿಯಂತ ಸಂಸ್ಥೆಗಳ ನಿರ್ವಹಣಾ ವೆಚ್ಚ ಹೆಚ್ಚಾಗಲಿದೆ.

ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಜನರ ಸಂಚಾರ ಕಡಿಮೆಯಾಗಿದೆ. ವಾರಂತ್ಯದಲ್ಲಿ ಸುಮಾರು 10 ಲಕ್ಷ ಟೋಲ್ ಸಂಗ್ರಹವಾಗುತ್ತಿತ್ತು. ಆದರೆ, ಈಗ ಅದರ ಅರ್ಧದಷ್ಟು ಸಹ ಸಂಗ್ರಹವಾಗಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!