Tuesday, June 9, 2026
Homeಕರಾವಳಿಬೆಳ್ತಂಗಡಿ : ಮಳೆಯ ಅಬ್ಬರಕ್ಕೆ ನದಿಯಲ್ಲಿ ತೇಲಿಬಂದ ತ್ಯಾಜ್ಯ ರಾಶಿ !

ಬೆಳ್ತಂಗಡಿ : ಮಳೆಯ ಅಬ್ಬರಕ್ಕೆ ನದಿಯಲ್ಲಿ ತೇಲಿಬಂದ ತ್ಯಾಜ್ಯ ರಾಶಿ !

- Advertisement -
- Advertisement -

ಬೆಳ್ತಂಗಡಿ: ಸೋಮವಾರ ಸಂಜೆ ತಾಲೂಕಿನಾದ್ಯಂತ ಸುರಿದ ಗುಡುಗು, ಮಿಂಚು ಸಹಿತ ಭಾರಿ ಮಳೆಗೆ ನೇತ್ರಾವತಿ, ಮೃತ್ಯುಂಜಯ ನದಿಗಳು ಉಕ್ಕಿ ಹರಿದಿದ್ದು, ಮರಮಟ್ಟುಗಳ ತ್ಯಾಜ್ಯ ರಾಶಿ ತೇಲಿಬಂದು ಕಿಂಡಿ ಅಣೆಕಟ್ಟುಗಳಲ್ಲಿ ಸಿಲುಕಿದೆ.

ಧರ್ಮಸ್ಥಳ, ಉಜಿರೆ, ಮುಂಡಾಜೆ, ದಿಡುಪೆ, ಕುಕ್ಕಾವು, ಮಿತ್ತಬಾಗಿಲು, ಚಾರ್ಮಾಡಿ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿದ ಪರಿಣಾಮ ದಿಡುಪೆ ಏಳುವರೆ ಹಳ್ಳ, ನೇತ್ರಾವತಿ, ಮೃತ್ಯುಂಜಯ ನದಿಗಳ ಕಿಂಡಿ ಅಣೆಕಟ್ಟುಗಳಲ್ಲಿ ರಾಶಿ ರಾಶಿ ಟನ್ ಗಟ್ಟಲೆ ಮರಮಟ್ಟು ಕಸಕಡ್ಡಿ ಶೇಖರಣೆಯಾಗಿದೆ.

- Advertisement -

Latest News

error: Content is protected !!