Friday, June 5, 2026
Homeಕರಾವಳಿಬೆಳ್ತಂಗಡಿ: ಇಂಟರ್ ವ್ಯೂಗೆಂದು ತೆರಳಿದ ಕಾರ್ಯತಡ್ಕದ ಶಿಕ್ಷಕಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಇಂಟರ್ ವ್ಯೂಗೆಂದು ತೆರಳಿದ ಕಾರ್ಯತಡ್ಕದ ಶಿಕ್ಷಕಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

- Advertisement -
- Advertisement -

ಬೆಳ್ತಂಗಡಿ: ಇಂಟರ್ ವ್ಯೂಗೆಂದು ತೆರಳಿದ ಕಾರ್ಯತಡ್ಕದ ಶಿಕ್ಷಕಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಾರ್ಯತಡ್ಕ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಭಾರತಿ ಎಸ್ (42) ಮೃತ ದುರ್ದೈವಿ. ಬೆಳ್ತಂಗಡಿಯ ಕಳೆಂಜ ಗ್ರಾಮದ ಉದ್ರಾಜೆ ನಿವಾಸಿಯಾಗಿರುವ ಭಾರತಿ ಜೂನ್ 12 ರಂದು ಸಂದರ್ಶನಕ್ಕೆಂದು ಬೆಂಗಳೂರಿಗೆ ತೆರಳಿದ್ದರು.ಈ ವೇಳೆ ಅಲ್ಲಿ ಅವರಿಗೆ ಹೃದಯಾಘಾತವಾಗಿದೆ.ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಭಾರತಿ ಅವರು ಕಳೆದ 8 ವರ್ಷಗಳಿಂದ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಮೃತರು ಪತಿ ಮೇಲಂತಬೆಟ್ಟು ಕಾಲೇಜಿನ ಉಪನ್ಯಾಸಕ ಡಾ. ಕುಶಾಲಪ್ಪ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!