Monday, November 16, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪುಂಜಾಲಕಟ್ಟೆ ಸರಕಾರಿ ಶಾಲೆಯಲ್ಲಿ ರಾಜಕೀಯ ಭಾಷಣ ಮಾಡಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ : ಪುಂಜಾಲಕಟ್ಟೆ ಸರಕಾರಿ ಶಾಲೆಯಲ್ಲಿ ರಾಜಕೀಯ ಭಾಷಣ ಮಾಡಿದ ಶಾಸಕ ಹರೀಶ್ ಪೂಂಜ

- Advertisement -
- Advertisement -

ಬೆಳ್ತಂಗಡಿ : ಪೂಂಜಾಲಕಟ್ಟೆಯ ಸರಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಈ ದರಿದ್ರ ಕಾಂಗ್ರೆಸ್ ಪಕ್ಷವನ್ನು ನೀವು ಬೆಂಬಲಿಸಬೇಡಿ ಎಂದು ಮಕ್ಕಳಿಗೆ ಕರೆ ನೀಡಿ ಕಾರ್ಯಕ್ರಮದಲ್ಲಿ ಮಕ್ಕಳಿಂದ ನರೇಂದ್ರ ಮೋದಿಯವರಿಗೆ ಜಯಕಾರ ಘೋಷಣೆ ಹಾಕಿಸಿದ ಘಟನೆ ನ.14 ರಂದು ನಡೆದಿದ್ದು ಇದರ ವಿಡಿಯೋಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೆಳ್ತಂಗಡಿ ತಾಲೂಕಿನ ಪೂಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಒಂದುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಭಾ ಭವನದ ಉದ್ಘಟನಾ ಕಾರ್ಯಕ್ರಮಕ್ಕೆ ನ.14 ರಂದು ಸಿದ್ದತೆ ನಡೆದಲಾಗಿತ್ತು. ಆದರೆ ರಾಜ್ಯ ಸರಕಾರದ ಅನುದಾನದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡದ ಉದ್ಘಾಟನೆಗೆ ಪ್ರೋಟೋಕಾಲ್ ಮೀರಿ ರಾಜ್ಯ ಸರಕಾರದ ಕಾನೂನಿಗೆವಿರುದ್ದ ವಾಗಿ ಉದ್ಘಾಟನೆ ನಡೆಸುತ್ತಿರುವುದಾಗಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ದೂರು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಕಾರ್ಯಕ್ರಮ ನ.13 ರಂದು ರದ್ದಾಗಿತ್ತು ಎನ್ನಲಾಗಿದೆ.

ನ.14 ರಂದು ಪೂಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲೆಯ ಅಭಿವೃದ್ಧಿಗೆ ನೆರವಾದ ಖಾಸಗಿ ಸಂಸ್ಥಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ಮಾತನಾಡುತ್ತಾ “ನಿಮ್ಮ ಶಾಲೆಗೆ ಒಂದುರುಪಾಯಿ ಸಹಾಯ ಮಾಡದ ದರಿದ್ರ ಪಾರ್ಟಿ ಕಾಂಗ್ರೆಸ್ ಬೆಳ್ತಂಗಡಿಯಲ್ಲಿದೆ. ಅವರು ದೂರು ಕೊಟ್ಟು ಇಲ್ಲಿಯ ಶಿಕ್ಷಕರಿಗೆ ಚಿತ್ರಹಿಂಸೆ ನೀಡಿ ಶಾಲೆಯ ಕಾರ್ಯಕ್ರಮ ಬದಲಿಸಿದ್ದಾರೆ. ಇಂತಹ ದರಿದ್ರ ಕಟ್ಟಂತಹ ಪಕ್ಷವನ್ನು ನಂಬಿ ಯಾವೊತ್ತೂ ಹೋಗಬೇಡಿ ದೇಶ ಇರುವುದು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎಂದು ಮಾತನಾಡಿದ್ದು ಭಾಷಣದ ಕೊನೆಯಲ್ಲಿ ಭಾರತ ದೇಶಕ್ಕೆ ಜಯಕಾರ ಕೋರುವ ಸಂದರ್ಭದಲ್ಲಿ ನರೇಂದ್ರ ಮೋದಿಯವರಿಗೂ ಮಕ್ಕಳಿಂದ ಜಯಕಟರ ಘೋಷಿಸಿದ್ದಾರೆ‌. ಇದೀಗ ಶಾಸಕ ಹರೀಶ್ ಪೂಂಜ ಅವರು ಶಾಲೆಯಲ್ಲಿ ಮಾಡಿರುವ ರಾಜಕೀಯ ಭಾಷಣ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಾಸಕರು ಶಾಲೆಯಲ್ಲಿ ಮಾಡಿರುವ ಈ ರಾಜಕೀಯ ಭಾಷಣ ಹಲವಾರು ಚರ್ಚೆಗಳನ್ನು ಹುಟ್ಟು ಹಾಕಿದ್ದು ಇದರ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಶಾಕಸರು ತಮ್ಮ ರಾಜಕೀಯ ಉಪಯೋಗಕ್ಕೆ ಶಾಲೆಯನ್ನು ಶಾಲಾ ಮಕ್ಕಳನ್ನು ಉಪಯೋಗಿಸಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ

- Advertisement -

Latest News

error: Content is protected !!